ಚಿಕ್ಕಮಗಳೂರಿನಲ್ಲಿ ಕರಸೇವಕ ಕೆ.ಪ್ರವೀಣ ಬೆಳ್ಳೂರು ಅವರನ್ನು ಕೋಟ ಶ್ರೀನಿವಾಸ ಪೂಜಾರಿ ಸನ್ಮಾನಿಸಿದರು. ಜಿಲ್ಲಾ ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು. 
ಜಿಲ್ಲೆ

ಕರಸೇವಕ ಪ್ರವೀಣ ಭೇಟಿಯಾದ ಕೋಟ ಪೂಜಾರಿ

ಉಡುಪಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಕರಸೇವಕ ಕೆ.ಪ್ರವೀಣ​ ಬೆಳ್ಳೂರು ಅವರನ್ನು ಗುರುವಾರ ಭೇಟಿ ಮಾಡಿ, ಸನ್ಮಾನಿಸಿ, ರಾಮ ನವಮಿಯ ಶುಭಾಶಯ ತಿಳಿಸಿದರು.

ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟ ಸಂದರ್ಭದಲ್ಲಿ ಪ್ರವೀಣ ಕರಸೇವಕರಾಗಿ ಭಾಗವಹಿಸಿದ್ದರು. ಹೋರಾಟ ಮುಗಿಸಿ ಹಿಂದಿರುಗುವಾಗ ಅಪಘಾತಕ್ಕೊಳಗಾಗಿ ಇನ್ನೂ ನಡೆಯಲಾರದ ಸ್ಥಿಯಲ್ಲಿದ್ದಾರೆ.

ನನ್ನ ಪಾಲಿನ ಸುದಿನ

ಕೋಟ ಪೂಜಾರಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿಮಾರ್ಣ ಆಗಬೇಕು ಎಂಬ ಕನಸು ಹೊತ್ತು ಕರೆಸೇವಕರಾಗಿ ಅಲ್ಲಿಗೆ ಧಾವಿಸಿ ಬೆಳ್ಳೂರು ಅವರು ಸೇವೆ ಸಲ್ಲಿಸಿದ್ದರು. ಅವರ ಅಂದಿನ ಕನಸು ನನಸಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿಮಾರ್ಣ ಆಗಿದೆ. ಹೀಗಾಗಿ ಅವರ ಮೊಗದಲ್ಲಿ ಸಂತಸ ತುಂಬಿದೆ. ಅವರನ್ನು ಭೇಟಿಯಾಗಿ ರಾಮ ನವಮಿಯ ಶುಭಾಶಯ ಸಲ್ಲಿಸಿ, ಅವರ ಜೀವನಕ್ಕೆ ಶುಭ ಹಾರೈಸಿದ್ದೇನೆ. ಈ ದಿನ ನನ್ನ ಪಾಲಿನ ಸುದಿನ ಎಂದು ನಾನು ಭಾವಿಸುತ್ತೇನೆ. ಅವರಿಗೆ ಶ್ರೀರಾಮಚಂದ್ರನ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಚಿಕ್ಕಮಗಳೂರು ಜಿಲ್ಲಾ ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.