ಕೋಟ: ಕೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಮಂಗಳವಾರ ಶಾಲಾ ವಠಾರದಲ್ಲಿ ಜರುಗಿತು. ಸಾಂಸ್ಕೃತಿಕ ಚಿಂತಕಿ ಭಾರತಿ ವಿ.ಮಯ್ಯ ಉದ್ಘಾಟಿಸಿದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ವಿದ್ಯಾರ್ಥಿಗಳು ರಚಿಸಿದ ಹಸ್ತ ಪತ್ರಿಕೆ ಬಿಡುಗಡೆಗೊಳಿಸಿದರು. ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಗೀತಾನಂದ ಫೌಂಡೇಶನ್ ವತಿಯಿಂದ ಬಹುಮಾನ ವಿತರಿಸಲಾಯಿತು.
ಸಾಧಕ ವಿದ್ಯಾರ್ಥಿಗಳಿಗೆ ದತ್ತಿ ನಿಧಿಯನ್ನು ಶಾಲಾ ಶಿಕ್ಷಕಿ ಶಾರದಾ ಪ್ರಕಟಿಸಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಿಕ್ಷಕಿಯರಾದ ಮಾನಸ, ಸುಮಾ ಪ್ರಶಸ್ತಿ ಪತ್ರ ವಾಚಿಸಿದರು.
ಜಿಪಂ ಮಾಜಿ ಸದಸ್ಯ ಶಂಕರ್ ಕುಂದರ್, ಸಿಆರ್‌ಪಿ ಸವಿತಾ ಆಚಾರ್, ಸಾಹಿತಿ ಶೈಕ್ಷಣಿಕ ಪ್ರೋತ್ಸಾಹಕ ಪ್ರೊ.ಉಪೇಂದ್ರ ಸೋಮಯಾಜಿ, ಉದ್ಯಮಿ ಸುಬ್ರಾಯ ಆಚಾರ್, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಎಚ್.ಪ್ರಮೋದ್ ಹಂದೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಹಾಲಕ್ಷ್ಮೀ ಸೋಮಯಾಜಿ, ಉದ್ಭವಿ ಮತ್ತು ಪ್ರಣೀತ್ ಕುಮಾರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಪುಷ್ಪಾವತಿ ಹೊಳ್ಳ ಸ್ವಾಗತಿಸಿದರು. ಶಿಕ್ಷಕರಾದ ರೂಬಿ ಪ್ರಿಂಟೋ ನಿರೂಪಿಸಿದರು.