ಕಾಳಗಿ (ಕಲಬುರಗಿ): ತಾಲೂಕಿನ ಕೋರವಾರದ ಶ್ರೀ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಇಂದು (ಭಾನುವಾರ ಮಾ.10ರಂದು) ರಾತ್ರಿ 11ಕ್ಕೆ ಅಗ್ಗಿ ಪ್ರವೇಶ ನಡೆಯಲಿದೆ.
ಸೋಮವಾರ(ಮಾ.11) ಬೆಳಗ್ಗೆ ರುದ್ರಾಭಿಷೇಕ, ಸಂಜೆ 5ಕ್ಕೆ ನಂದಿಧ್ವಜ, ಕಳಸದ ಮೆರವಣಿಗೆ, ರಾತ್ರಿ 8 ಗಂಟೆಗೆ ಭವ್ಯ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.