ಜಿಲ್ಲೆ

ಕೊರಗ ಜನಾಂಗದ ವೈದ್ಯಕೀಯ ವೆಚ್ಚ ಮರು ಪಾವತಿಗೆ ಆಗ್ರಹ

ಗೋಪಾಲಕೃಷ್ಣ ಪಾದೂರ್

ಡುಪಿ: ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊರಗ ಜನಾಂಗದ ವೈದ್ಯಕೀಯ ವೆಚ್ಚ ಮರು ಪಾವತಿ ರದ್ದು ಮಾಡಿದ ಆದೇಶವನ್ನು ರಾಜ್ಯ ಸರ್ಕಾರ ಪುನರ್‌ಪರಿಶೀಲಿಸಿ, ಅನುದಾನ ಬಿಡುಗಡೆಗೊಳಿಸಬೇಕು ಎಂದು ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಸುಶೀಲಾ ನಾಡ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸಮುದಾಯದ ಆರೋಗ್ಯ ಹದಗೆಡುವುದಕ್ಕೆ ಮದ್ಯಪಾನ ಮತ್ತು ದುಶ್ಚಟ ಕಾರಣ ಎಂಬುದಾಗಿ ಜಿಲ್ಲಾಡಳಿತ ವರದಿ ನೀಡಿದ್ದು, ಇದರಿಂದ ಅನುದಾನ ಸ್ಥಗಿತಗೊಂಡಿದೆ. ಜಿಲ್ಲೆಯಲ್ಲಿ ಕೊರಗ ಜನಾಂಗ ಆರ್ಥಿಕವಾಗಿ ತೀರ ದುರ್ಬಲವಾಗಿದ್ದು, ಸಮುದಾಯ ಜನಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ರಕ್ತಹೀನತೆ, ಅಪೌಷ್ಟಿಕತೆ, ಟಿ.ಬಿ. ಕ್ಯಾನ್ಸರ್ ಮೊದಲಾದ ಮಾರಕ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಸಲ್ಲಿಸಿರುವ ವರದಿ ಅಪ್ರಸ್ತುತ. ಆದ್ದರಿಂದ ಐಟಿಡಿಪಿ ಇಲಾಖೆ ಮೂಲಕ ವೈದ್ಯಕೀಯ ವೆಚ್ಚ ಮರುಪಾವತಿಸುವ ಯೋಜನೆ ಮುಂದುವರಿಸಬೇಕು. ರಾಜ್ಯ ಸರ್ಕಾರ ಜೇನುಕುರುಬ ಮತ್ತು ಕೊರಗ ಸಮುದಾಯದ ಅಭಿವೃದ್ಧಿಗೆ ನೀಡುತ್ತಿದ್ದ ಮೂಲನಿವಾಸಿಗಳ ಅನುದಾನ (ಪಿವಿಟಿಜಿ ಗ್ರಾೃಂಟ್) 2008ರಿಂದ ಸ್ಥಗಿತಗೊಂಡಿದ್ದು, ಇದನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಮಾಜಿ ಅಧ್ಯಕ್ಷ ಬೊಗ್ರ ಕೊರಗ, ಕಾರ್ಯದರ್ಶಿ ಪುತ್ರನ್, ಸದಸ್ಯರಾದ ಸುನಂದಾ, ದಿವಾಕರ್ ಉಪಸ್ಥಿತರಿದ್ದರು.