ಕೊಪ್ಪಳ: ಕ್ಷೇತ್ರದಲ್ಲಿ ಮೇ 7ರಂದು ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಮೈಕ್ರೋ ವೀಕ್ಷಕರ ಪಾತ್ರ ಮುಖ್ಯ ಎಂದು ಚುನಾವಣಾ ಸಾವಾನ್ಯ ವೀಕ್ಷಕಿ ಹೇಮಪುಷ್ಪಾ ಶರ್ಮಾ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ಮೈಕ್ರೋ ವೀಕ್ಷಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮೈಕ್ರೋ ವೀಕ್ಷಕರು ಕೆಲಸ ಮಾಡಿ. ಮತದಾನ ಮುನ್ನಾ ದಿನ ಹಾಗೂ ಮತದಾನ ದಿನದಂದು ನಿಮ್ಮ ಪಾತ್ರ ಬಹುಮುಖ್ಯ. ಮುಕ್ತ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ. ನೀವು ಚುನಾವಣಾ ವೀಕ್ಷಕರ ಪ್ರತಿನಿಧಿಗಳಂತೆ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ವಾತನಾಡಿ, ಮೈಕ್ರೋ ವೀಕ್ಷಕರು ಮಸ್ಟರಿಂಗ್ ದಿನ ವರದಿ ಮಾಡಿಕೊಳ್ಳಿ. ನಿಮ್ಮೊಂದಿಗೆ ಸೆಕ್ಟರ್ ಅಧಿಕಾರಿಗಳು ಕೆಲಸ ವಾಡಲಿದ್ದು, ಮಸ್ಟರಿಂಗ್ ಹಾಗೂ ಮತದಾನ ದಿನ ತಮ್ಮ ಕೆಲಸ ಬಹಳ ಮುಖ್ಯ. ನೀವು ಗಮನಿಸಬೇಕಾದ ಅಂಶಗಳ ಬಗ್ಗೆ ಚೆಕ್‌ಲಿಸ್ಟ್ ನೀಡಿದ್ದು, ಸಂಪೂರ್ಣ ಅವಲೋಕಿಸಿ ವರದಿ ನೀಡಿ ಎಂದರು. ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಚುನಾವಣಾ ಶಾಖೆ ತಹಸೀಲ್ದಾರ್ ರವಿಕುಮಾರ ವಸದ ಇತರರಿದ್ದರು.