ಬಾಗಲಕೋಟೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಪಂ ನರೇಗಾ ಕಾಯಕಬಂಧುಗಳಾದ ಲಿಂಗತ್ವ ಅಲ್ಪಸಂಖ್ಯಾತರಾದ ಶರಣಮ್ಮ ಹಾಗೂ ಹುಲಿಗೆಮ್ಮಗೆ ಆರ್‌ಡಿಪಿಆರ್ ಆಯುಕ್ತೆ ಶಿಲ್ಪಾನಾಗ್ ‘ಶ್ರಮ ಚೇತನ್’ ಪ್ರಶಸ್ತಿ ನೀಡಿದರು. 
ಜಿಲ್ಲೆ

ಇಬ್ಬರು ತೃತೀಯಲಿಂಗಿಗಳಿಗೆ ಒಲಿದ ನರೇಗಾದ ಶ್ರಮ ಚೇತನ ಪ್ರಶಸ್ತಿ

ಕೊಪ್ಪಳ: ಗಂಗಾವತಿ ತಾಲೂಕಿನ ಬಸವಪಟ್ಟಣ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಯಕ ಬಂಧುಗಳಾಗಿ ಕೆಲಸ ನಿರ್ವಹಿಸುತ್ತಿರುವ ಲಿಂಗತ್ವ ಅಲ್ಪಸಂಖ್ಯಾತರಾದ ಶರಣಮ್ಮ ಹಾಗೂ ಹುಲಿಗೆಮ್ಮ ಶ್ರಮ ಚೇತನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನರೇಗಾ ಮತ್ತು ಗ್ರಾಮೀಣ ಜೀವನೋಪಾಯ ಅಭಿಯಾನ ಸೌಲಭ್ಯ ಪಡೆದು ಸ್ವಾವಲಂಬಿ ಜೀವನ ರೂಪಿಸಿಕೊಂಡಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಬಾಗಲಕೋಟೆ ಜಿಪಂ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಕಾರ್ಯದರ್ಶಿ ಉಮಾ ಮಹಾದೇವನ್, ಆಯುಕ್ತೆ ಶಿಲ್ಪಾನಾಗ್ ಪ್ರಶಸ್ತಿ ನೀಡಿ ಸನ್ಮಾನಿಸಿದರು.