ತಾವರಗೇರಾ ಸಮೀಪದ ಮ್ಯಾದರಡೊಕ್ಕಿ ಸೀಮಾದಲ್ಲಿ ಅಕ್ರಮವಾಗಿ ಬೆಳೆದ 19 ಸಾವಿರ ರೂ. ಮೌಲ್ಯದ 9.8 ಕೆ.ಜಿ. ಗಾಂಜಾ ಗಿಡಗಳನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.  
ಜಿಲ್ಲೆ

ಮ್ಯಾದರಡೊಕ್ಕಿಯಲ್ಲಿ ಅಕ್ರಮ ಗಾಂಜಾ ವಶ

ಕೊಪ್ಪಳ: ತಾವರಗೇರಾ ಸಮೀಪದ ಮ್ಯಾದರಡೊಕ್ಕಿ ಸೀಮಾದಲ್ಲಿ ಅಕ್ರಮವಾಗಿ ಬೆಳೆದ 19 ಸಾವಿರ ರೂ. ಮೌಲ್ಯದ 9.8 ಕೆ.ಜಿ. ಗಾಂಜಾ ಗಿಡಗಳನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳಮಳ್ಳಿ ತಾಂಡಾದ ರಾಮಪ್ಪ ಸಂಗನಾಳ ಎಂಬಾತ ಗಾಂಜಾ ಬೆಳೆದಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸರ್ವೇ ನಂಬರ್ 104ರಲ್ಲಿ ತೆಂಗಿನ ಗಿಡಗಳ ನಡುವೆ ಗಾಂಜಾ ಬೆಳೆಯಲಾಗಿದೆ. 19 ಸಾವಿರ ರೂ. ಮೌಲ್ಯದ 9.8 ಕೆಜಿ ಗಾಂಜಾ ಇದಾಗಿದ್ದು, ಅಕ್ರಮ ಮಾರಾಟ ಉದ್ದೇಶದಿಂದಲೇ ಬೆಳೆಯಲಾಗಿದೆ ಎನ್ನಲಾಗಿದೆ. ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.