ಕುಷ್ಟಗಿ: ಪಟ್ಟಣದ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸಂಗ್ರಹಗೊಂಡ ಚರಂಡಿ ದ್ರವತ್ಯಾಜ್ಯ ತೆರವಿಗೆ ಪುರಸಭೆ ಮುಂದಾಗಿದ್ದು, ಜೆಸಿಬಿ ಯಂತ್ರದ ಸಹಾಯದಿಂದ ಮಂಗಳವಾರ ಕಾಲುವೆಯಲ್ಲಿನ ಹೂಳು ಹೊರ ತೆಗೆಯಲಾಯಿತು.
ಬಸ್ ನಿಲ್ದಾಣ ಹಾಗೂ ಸಾರಿಗೆ ಘಟಕದ ಮುಂಭಾಗದ ಕೊಪ್ಪಳ ರಸ್ತೆಯ ಮಲ್ಲಯ್ಯ ವೃತ್ತದವರೆಗಿನ ಚರಂಡಿ ಸಂಪೂರ್ಣ ಹೂಳು ತುಂಬಿದೆ. ಅವಕಾಶ ಇರುವೆಡೆ ಜೆಸಿಬಿ ಯಂತ್ರದಿಂದ ಹೂಳು ತೆಗೆಯಲಾಗಿದೆ. ಕಾಲುವೆಯ ಮೇಲೆಯೇ ಗೂಡಂಗಡಿಗಳನ್ನಿಟ್ಟಿರುವುದರಿಂದ ಅಂಗಡಿಗಳ ತೆರವಿಗೆ ಸೂಚಿಸಲಾಯಿತು.
ಗೂಡಂಗಡಿ ತೆರವು ನಂತರ ಚರಂಡಿ ಕಾಲುವೆ ಸಂಪೂರ್ಣ ಮುಚ್ಚಿ ಹೋಗಿದ್ದು ಕಂಡುಬಂತು. ಕೆಲ ಅಂಗಡಿಕಾರರು ಮರಮ್ ಹಾಕಿ ಮುಚ್ಚಿ ಅದರ ಮೇಲೆ ಗೂಡಂಗಡಿ ಇಟ್ಟಿದ್ದಾರೆ. ಇನ್ನೂ ಕೆಲ ಅಂಗಡಿಗಳ ಕೆಳಗಿನ ಕಾಲುವೆಯಲ್ಲಿ ಕಸ ಇತರ ತ್ಯಾಜ್ಯ ಸಂಗ್ರಹಗೊಂಡು ಚರಂಡಿ ದ್ರವತ್ಯಾಜ್ಯ ಸಾಗಲು ಮಾರ್ಗ ಇಲ್ಲದಂತಾಗಿದೆ. ಈ ಕುರಿತು ವಿಜಯವಾಣಿ ಆ.16ರಂದು ‘ಬಸ್ ಪ್ರಯಾಣಿಕರ ಸ್ವಾಗತಿಸುತ್ತಿದೆ ತ್ಯಾಜ್ಯ’ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೋಟ್
ಬಸ್ ನಿಲ್ದಾಣ ಮುಂಭಾಗದಲ್ಲಿ ಸಂಗ್ರಹಗೊಂಡಿದ್ದ ದ್ರವತ್ಯಾಜ್ಯ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ಕಾಲುವೆಯ ಮೇಲಿನ ಗೂಡಂಗಡಿ ತೆರವಿಗೂ ಸೂಚನೆ ನೀಡಲಾಗಿದೆ. ಹೂಳು ಸಂಪೂರ್ಣ ತೆಗೆಯಿಸಿ ದ್ರವತ್ಯಾಜ್ಯ ಸರಾಗವಾಗಿ ಮುಂದೆ ಸಾಗುವಂತೆ ಮಾಡಲಾಗುವುದು. ರಸ್ತೆಯೂ ಇಕ್ಕಟ್ಟಾಗಿ ವಾಹನಗಳ ನಿಲುಗಡೆ ಹಾಗೂ ಬಸ್ ಇನ್ನಿತರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿರುವುದರಿಂದ ಮತ್ತೆ ಗೂಡಂಗಡಿಗಳಿಗೆ ಅವಕಾಶ ನೀಡುವುದಿಲ್ಲ.ಬಿ.ಟಿ.ಬಂಡಿವಡ್ಡರ್ಮುಖ್ಯಾಧಿಕಾರಿ, ಪುರಸಭೆ