ಜಿಲ್ಲೆ

ಕೊಪ್ಪಳ ತಾಲೂಕಿನ ಐರನ್, ಸ್ಪಾಂಜ್ ಕಾರ್ಖಾನೆಗಳಿಗೆ ಎಸಿ ಭೇಟಿ

ಕೊಪ್ಪಳ: ತಾಲೂಕಿನ ವಿವಿಧ ಐರನ್, ಸ್ಪಾಂಜ್ ಕಾರ್ಖಾನೆಗಳಿಗೆ ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟಕಗಳಿಂದ ವಾಯು ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಡಿಸಿ ಎಂ.ಸುಂದರೇಶ ಬಾಬು ಏಳು ತಾಂತ್ರಿಕ ತಂಡಗಳನ್ನು ರಚಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳ ಪಾಲನೆ ಬಗ್ಗೆ ಪರಿಶೀಲನೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸರ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇತರ ಅಧಿಕಾರಿಗಳೊಂದಿಗೆ ಹಿರೇ ಬಗನಾಳ, ಹಾಲವರ್ತಿ, ಕೆರೆಹಳ್ಳಿ ಗ್ರಾಮಗಳ ವ್ಯಾಪ್ತಿಯ ಕಾರ್ಖಾನೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಮಾಲಿನ್ಯ ನಿಯಂತ್ರಣಕ್ಕೆ ಇರುವ ಮಾರ್ಗಸೂಚಿ ಪಾಲಿಸುವಂತೆ ತಾಕೀತು ಮಾಡಿದರು.