ಹನುಮಸಾಗರ: ಸಮೀಪದ ಹೂಲಗೇರಿ ಆರ್.ಬಿ. ಪಾಟೀಲ್ ಪ್ರೌಢ ಶಾಲೆಯಲ್ಲಿ ಬುಧವಾರ ನಡೆದ ಹನುಮಸಾಗರ ಹೋಬಳಿ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕಿಯರ ಸ.ಪ್ರೌ.ಶಾ. ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗುಂಪು ಆಟಗಳಾದ ಖೋಖೋ, ವಾಲಿಬಾಲ್, ಥ್ರೋಬಾಲ್‌ನಲ್ಲಿ (ಪ್ರಥಮ), ವೈಯಕ್ತಿಕ ಆಟಗಳಾದ ತ್ರಿವಿದ ಜಂಪ್ ಅನುರಾಧಾ ಬಾಗಲಿ (ಪ್ರಥಮ), 800 ಮೀಟರ್ ಓಟ ಶಿಲ್ಪಾ ನಾಗರಾಳ (ದ್ವಿತೀಯ), ಗುಂಡು ಎಸೆತ ಶ್ವೇತಾ ಪರಸಾಪುರ (ದ್ವಿತೀಯ), 400 ಮೀಟರ್ ಓಟ ಅಶ್ವಿನಿ ಅಂಬಿಗೇರ (ದ್ವಿತೀಯ) ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.