ತಾವರಗೇರಾ ಗವಿಶ್ರೀ ಸ್ಪೋರ್ಟ್ಸ್ ಕ್ಲಬ್‌ನ ಮಂಜುನಾಥ್ ದಸರಾ ಕ್ರೀಡಾಕೂಟದಲ್ಲಿ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾದರು. 
ಜಿಲ್ಲೆ

ಕ್ರೀಡಾಪಟುಗಳು ವಿಭಾಗ ಮಟ್ಟಕ್ಕೆ ಆಯ್ಕೆ

ತಾವರಗೇರಾ: ಕೊಪ್ಪಳದ ನಗರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ತಾವರಗೇರಾ ಗವಿಶ್ರೀ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟುಗಳು ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗವಿಶ್ರೀ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟುಗಳು ಸಾಧನೆ

ಕ್ಲಬ್‌ನ ಮಂಜುನಾಥ್ ಉದ್ದ ಜಿಗಿತದಲ್ಲಿ (ಪ್ರಥಮ), 200 ಮೀಟರ್ ಓಟದಲ್ಲಿ ಐಶ್ವರ್ಯ ರಮೇಶ ( ದ್ವಿತೀಯ ಸ್ಥಾನ ), 400 ಮೀಟರ್ ಮತ್ತು 100 ಮೀಟರ್ ರಿಲೇ ಅಲ್ತಾಪ್, ಕಿರಣಕುಮಾರ, ಶಿವುಕುಮಾರ, ಮಂಜುನಾಥ (ದ್ವಿತೀಯ ಸ್ಥಾನ) ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ಲಬ್ ನ ಗೌರವಾಧ್ಯಕ್ಷ ವೀರನಗೌಡ ಪಾಟೀಲ್, ಅಧ್ಯಕ್ಷ ಸಾಗರ ಭೇರಿ, ಉಪಾಧ್ಯಕ್ಷ ಸಂಜೀವ ಚಲುವಾದಿ, ತರಬೇತಿದಾರ ಖಾಜಾ ಮೈನುದ್ದೀನ್ ಹರ್ಷ ವ್ಯಕ್ತಪಡಿಸಿದರು.