ಕೊಪ್ಪಳದಲ್ಲಿ ಸೋಮವಾರ ಒಪಿಎಸ್ ಸಂಕಲ್ಪ ಯಾತ್ರೆ ನಡೆಯಿತು. 
ಜಿಲ್ಲೆ

ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿಗೊಳಿಸಿ, ನೌಕರರ ಜಿಲ್ಲಾ ಘಟಕ ಪದಾಧಿಕಾರಿ ಆಗ್ರಹ

Koppal

ಕೊಪ್ಪಳ: ನೂತನ ಪಿಂಚಣಿ ಯೋಜನೆ ವಿರೋಧಿಸಿ ಸರ್ಕಾರಿ ನೌಕರರು ಸೋಮವಾರ ನಗರಾದ್ಯಂತ ಒಪಿಎಸ್ ಸಂಕಲ್ಪ ಯಾತ್ರೆ ನಡೆಸಿದರು. ಎನ್‌ಪಿಎಸ್ ನೌಕರರ ಜಿಲ್ಲಾ ಘಟಕ ಪದಾಧಿಕಾರಿಗಳು ಯಾತ್ರೆಯನ್ನು ಬರ ಮಾಡಿಕೊಂಡರು. ಬಳಿಕ ನಗರದ ಗವಿಮಠ ಆವರಣದಿಂದ ಆರಂಭವಾದ ಯಾತ್ರೆ ಗಡಿಯಾರ ಕಂಬ ವೃತ್ತ, ಜವಾಹರ ರಸ್ತೆ, ಅಶೋಕ ವೃತ್ತ ಮಾರ್ಗವಾಗಿ ತಾಲೂಕು ಕ್ರೀಡಾಂಗಣ ತಲುಪಿತು. ಸಾವಿರಾರು ನೌಕರರು ಪಾಲ್ಗೊಂಡು ಎನ್‌ಪಿಎಸ್ ವಿರುದ್ಧ ಕಿಡಿ ಕಾರಿದರು. ಎನ್‌ಪಿಎಸ್ ಹಠಾವೊ ನೌಕರರ ಬಚಾವೊ, ಎನ್‌ಪಿಎಸ್ ರದ್ದುಪಡಿಸಿ, ಒಪಿಎಸ್ ಜಾರಿಗೊಳಿಸಿ ಮುಂತಾದ ಘೋಷಣೆ ಕೂಗಿದರು.

ಸರ್ಕಾರ ಎನ್‌ಪಿಎಸ್ ರದ್ದುಪಡಿಸಿ ಮೊದಲಿನಂತೆ ನೌಕರನ್ನು ನಿಶ್ಚಿತ ಪಿಂಚಣಿಗೆ ಒಳಪಡಿಸಬೇಕು. ಈ ಮೂಲಕ ನೌಕರರ ಭವಿಷ್ಯಕ್ಕೆ ಭದ್ರತೆ ಕಲ್ಪಿಸಬೇಕು. ಡಿಸೆಂಬರ್19ರಿಂದ ಎನ್‌ಪಿಎಸ್ ವಿರೋಧಿಸಿ ಮಾಡು ಇಲ್ಲವೆ ಮಡಿ ಧ್ಯೇಯದಡಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತೇವೆಂದು ತಿಳಿಸಿದರು.

ಎನ್‌ಪಿಎಸ್ ನೌಕರರ ರಾಜ್ಯ ಸಂಚಾಲಕ ಬಸವರಾಜ ಕೋಮಲಾಪುರ, ಶರಣಬಸನಗೌಡ ಪಾಟೀಲ್, ಮಂಜುನಾಥ ಬಿ, ಸಂಘದ ಜಿಲ್ಲಾಧ್ಯಕ್ಷ ಮುತ್ತು ಕಳಸಗೊಂಡ, ಜಿಲ್ಲಾ ಕಾರ್ಯದರ್ಶಿ ರುದ್ರೇಶ ಬೂದಿಹಾಳ, ನಿರ್ದೇಶಕ ಬಾಳಪ್ಪ ಕಾಳೆ, ಸುರೇಶ ತೋಟದ್, ಸಂತೋಷ ಪಾಟೀಲ್, ರಮೇಶ ಬುಡ್ಡಗೌಡರ್ ಇತರರಿದ್ದರು.