ಜಿಲ್ಲೆ

ಆಪ್‌ನಿಂದ ಗ್ರಾಮ ಸಂಪರ್ಕ ಅಭಿಯಾನ: ಕೊಪ್ಪಳ ಜಿಲ್ಲಾಧ್ಯಕ್ಷ ಹುಸೆನ್ ಸಾಬ್ ಹೇಳಿಕೆ

ಕೊಪ್ಪಳ: ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ತಾಲೂಕುವಾರು ಸಭೆ ನಡೆಸುವುದರ ಜತೆಗೆ ಗ್ರಾಮ ಸಂಪರ್ಕ ಅಭಿಯಾನ ಆಯೋಜಿಸುವ ಯೋಜನೆ ಇದೆ ಎಂದು ಎಎಪಿ ಜಿಲ್ಲಾಧ್ಯಕ್ಷ ಹುಸೇನ್‌ಸಾಬ್ ಗಂಗನಾಳ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೆಹಲಿಯಲ್ಲಿ ಉತ್ತಮ ಆಡಳಿತ ನೀಡಿದ್ದಕ್ಕೆ ಪಂಜಾಬ್‌ನಲ್ಲಿ ಅಧಿಕಾರ ಪಡೆದಿದ್ದೇವೆ. ಗುಜರಾತ್‌ನಲ್ಲೂ ಪಕ್ಷ ಬಲವರ್ಧನೆಯಾಗುತ್ತಿದೆ. ಉಳಿದ ರಾಜ್ಯಗಳಲ್ಲೂ ಸಂಘಟನೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧೆ ಮಾಡುವರು. ಜಿಲ್ಲೆಯಲ್ಲೂ ವಿಧಾನಸಭೆ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಲು ಹಲವು ಅಭ್ಯರ್ಥಿಗಳು ಬಯಸುತ್ತಿದ್ದಾರೆ. ಕನಕಗಿರಿ, ಕುಷ್ಟಗಿ, ಯಲಬುರ್ಗಾ ಹಾಗೂ ಗಂಗಾವತಿ ಕ್ಷೇತ್ರದಲ್ಲಿ ಹಲವರು ಟಿಕೆಕ್ ಕೇಳುತ್ತಿದ್ದಾರೆ. ಯಾರಿಗೆ ನೀಡಬೇಕೆಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ರೈತ ಸಂಘದೊಂದಿಗೆ ಜಂಟಿಯಾಗಿ ಚುನಾವಣೆ ನಡೆಸುವ ಬಗ್ಗೆ ಯಾವುದೇ ಮಾತುಕತೆಗಳಾಗಿಲ್ಲ ಎಂದು ತಿಳಿಸಿದರು. ಪಕ್ಷದ ಪದಾಧಿಕಾರಿಗಳಾದ ಬಸವರಾಜ ಮ್ಯಾಗಳಮನಿ, ಯಲ್ಲಪ್ಪ ಭೋವಿ, ಸುಭಾಷ ತಿಗರಿ ಇತರರಿದ್ದರು.