ಕುಷ್ಟಗಿಯಲ್ಲಿ ಕಲಬುರಗಿ ವಿಭಾಗ ಮಟ್ಟದ ಯೋಗ ಪಂದ್ಯಾವಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಚಾಲನೆ ನೀಡಿದರು. ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಸೈಯದ್ ಜಿಲಾನ್, ಮಲ್ಲಪ್ಪ ಕುದರಿ ಇತರರಿದ್ದರು. 
ಕೊಪ್ಪಳ

ಯೋಗದಿಂದ ರೋಗಮುಕ್ತ ಜೀವನ ಸಾಧ್ಯ

ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಅಭಿಮತ ವಿಭಾಗ ಮಟ್ಟದ ಪಂದ್ಯಾವಳಿಗೆ ಚಾಲನೆ

ಕುಷ್ಟಗಿ: ಮೊದಲು ಋಷಿಮುನಿಗಳು ಯೋಗದಿಂದ ಸದೃಢರಾಗಿದ್ದರು. ಈಗ ರೋಗ ಮುಕ್ತವಾಗಲು ನಿರಂತರ ಯೋಗಾಭ್ಯಾಸ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಹೇಳಿದರು.

ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ವಿಭಾಗ, ತಾಲೂಕು ಆಡಳಿತ, ತಾಪಂ ಹಾಗೂ ಸರ್ಕಾರಿ ಉರ್ದು ಪ್ರೌಢಶಾಲೆ ಕುಷ್ಟಗಿ ಸಹಯೋಗದೊಂದಿಗೆ ಶುಕ್ರವಾರ ಎನ್‌ಸಿಎಚ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಕಲಬುರಗಿ ವಿಭಾಗ ಮಟ್ಟದ 14 ಮತ್ತು 17 ವರ್ಷದ ವಯೋಮಿತಿಯ ಯೋಗಾಸನ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ನಿಯಮಬದ್ಧ ಉಸಿರಾಟ ಹಾಗೂ ಯೋಗಾಭ್ಯಾಸದಿಂದ ದೇಹಮನಸ್ಸು ಸದೃಢವಾಗುವುದರ ಜತೆಗೆ ಏಕಾಗ್ರತೆಯೂ ಹೆಚ್ಚುತ್ತದೆ. ಸೋಲು ಗೆಲುವು ಸಹಜವಾಗಿದ್ದು, ಗೆಲ್ಲುವ ಭರವಸೆಯೊಂದಿಗೆ ಆಟವಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಪ್ರಮುಖರಾದ ಶರಣಪ್ಪ, ಎಂ.ಎಂ. ಗೊಣ್ಣಾಗರ, ನೀಲನಗೌಡ ಹೊಸಗೌಡ್ರ, ಮಹಾಂತೇಶ ಜಾಲಿಗಿಡದ, ವಾಣಿಶ್ರೀ ಕುಲಕರ್ಣಿ, ಮಲ್ಲಪ್ಪ ಕುದರಿ, ಸೈಯದ್ ಜಿಲಾನಿ, ನಾಗಪ್ಪ ಹೊಸವಕ್ಕಲ್, ಉದಯಕುಮಾರ ಕೊಪ್ಪಳ, ಜಗದೀಶ ಸೂಡಿ, ಹನೀಫ್ ಬಿಳೇಕುದರಿ ಇತರರಿದ್ದರು. ಕಲಬುರಗಿ ವಿಭಾಗ ಮಟ್ಟದ ವಿವಿಧ ಜಿಲ್ಲೆಗಳಿಂದ 138 ಸ್ಪರ್ಧಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಶನಿವಾರ (ಅ.3) ಪಂದ್ಯಾವಳಿಗಳು ಆರಂಭವಾಗಲಿವೆ.