ಭಾನಾಪುರ ಅಂಗನವಾಡಿ ಕೇಂದ್ರಕ್ಕೆ ಗದಗ ಜಿಲ್ಲೆಯ ಅಂಗನವಾಡಿ ಮೇಲ್ವಿಚಾರಕರು ಭೇಟಿ ನೀಡಿದ್ದರು. 
ಕೊಪ್ಪಳ

ಗದಗ ಅಂಗನವಾಡಿ ಮೇಲ್ವಿಚಾರಕರ ಭೇಟಿ

ಭಾನಾಪುರದಲ್ಲಿ ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆ ವೀಕ್ಷಣೆ

ಕುಕನೂರು: ಭಾನಾಪುರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಗದಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 36 ಅಂಗನವಾಡಿ ಮೇಲ್ವಿಚಾರಕರು ಸೋಮವಾರ ಭೇಟಿ ನೀಡಿ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆ ಕುರಿತು ಮಾಹಿತಿ ಪಡೆದರು.

ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ ಮಾತನಾಡಿ, ಇಲ್ಲಿನ ಶಾಲಾ ಪೂರ್ವ ಶಿಕ್ಷಣ ಕಾರ್ಯಕ್ರಮವನ್ನು ಮಾದರಿಯಾಗಿ ಇಟ್ಟುಕೊಂಡು ಗದಗ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಳವಡಿಸಿಕೊಳ್ಳಲು ಶೈಕ್ಷಣಿಕವಾಗಿ ಅಂಗನವಾಡಿಗಳಿಗೆ ಭೇಟಿ ನೀಡಿದ್ದಾರೆ.

ಮುಕ್ತ ಆಟ, ಪ್ರಾರ್ಥನೆ, ಅಂಗನವಾಡಿ ನಿಯಮಗಳು, ಹೆಸರಿನ ಚೀಟಿ, ಕ್ಯಾಲೆಂಡರ್, ಹವಾಮಾನ, ಕಥೆ, ಅಭಿನಯ ಗೀತೆ, ನಾಟ್ಯ, ಸಂಗೀತ, ಆಟ, ಚರ್ಚೆ, ಕ್ರಿಯಾತ್ಮಕ ಚಟುವಟಿಕೆಗಳು, ಪುನರಾವಲೋಕನ ಸೇರಿ ಹಲವು ಚಟುವಟಿಕೆಗಳನ್ನು ವೀಕ್ಷಿಸಿದ್ದಾರೆ ಎಂದರು.

ಅಂಗನವಾಡಿ ಮೇಲ್ವಿಚಾರಕಿ ಜಯಲಕ್ಷ್ಮೀ ಮೆಣಸಿನಕಾಯಿ, ಜಿಲ್ಲಾ ವ್ಯವಸ್ಥಾಪಕ ಅಶೋಕ, ಅಂಗನವಾಡಿ ಕಾರ್ಯಕರ್ತೆ ಬಸಮ್ಮ ಇತರರಿದ್ದರು.