ಹಾಗಲದಾಳ ಗ್ರಾಮದಲ್ಲಿ ಏರ್ಪಡಿಸಿದ್ದ ಕಬಡ್ಡಿ ಕ್ರೀಡಾಕೂಟಕ್ಕೆ ಮಾದಾಪುರದ ಅಭಿನವ ಚಂದ್ರಶೇಖರ ಶ್ರೀಗಳು ಚಾಲನೆ ನೀಡಿದರು. ಪ್ರಮುಖರಾದ ಚಂದ್ರಶೇಖರ ಬಾಬು, ಶಶಿಧರ ಮುದ್ದಲಗುಂದಿ, ರಾಜು, ಉಮೇಶ ಇತರರಿದ್ದರು.  Shashidhara L
ಕೊಪ್ಪಳ

ಕಬಡ್ಡಿ, ರಾಯಚೂರು ಜಿಲ್ಲೆಯ ಸೋಮಲಾಪುರ ತಂಡ ಪ್ರಥಮ

ತಾವರಗೇರಾ: ಕಬಡ್ಡಿ ಆಟ ಗ್ರಾಮೀಣ ಭಾಗದ ಕ್ರೀಡೆ. ಯುವಜನರ ಮೆಚ್ಚಿನ ಆಟ. ದೈಹಿಕ ಸದೃಢತೆ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಮಾದಾಪುರ-ಗುಮ್ಮಗೋಳದ ಅಭಿನವ ಚಂದ್ರಶೇಖರ ಶ್ರೀಗಳು ಹೇಳಿದರು.

ಹಾಗಲದಾಳ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಅಂತರಜಿಲ್ಲಾ ಕಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡಾಕೂಟದಲ್ಲಿ ಅಂತರಜಿಲ್ಲೆಯ ವಿವಿಧ ಗ್ರಾಮಗಳಿಂದ 40 ತಂಡಗಳು ಭಾಗವಹಿಸಿದ್ದವು.

ಗ್ರಾಪಂ ಅಧ್ಯಕ್ಷರಾಗಿದ್ದ ಹಾಗಲದಾಳ ಗ್ರಾಮದ ಲಕ್ಷ್ಮಣರಡ್ಡಿ ಸ್ಮರಣಾರ್ಥ ಗೆದ್ದ ತಂಡಗಳಿಗೆ ಟ್ರೋಫಿ ನೀಡಲಾಯಿತು. ಕಬಡ್ಡಿಯಲ್ಲಿ ರಾಯಚೂರು ಜಿಲ್ಲೆಯ ಸೋಮಲಾಪುರ ತಂಡ ಪ್ರಥಮ ಹಾಗೂ ಶ್ರೀಪುರಂ ಜಂಕ್ಷನ್ ತಂಡ ದ್ವಿತೀಯ ಹಾಗೂ ಹೆಸರೂರು ಗ್ರಾಮದ ತಂಡ ತೃತೀಯ ಸ್ಥಾನ ಪಡೆಯಿತು.

ಗ್ರಾಮದ ಪ್ರಮುಖ ಶಶಿಧರ ಮುದ್ದಲಗುಂದಿ ಅಧ್ಯಕ್ಷತೆವಹಿಸಿದ್ದರು. ಪ್ರಮುಖರಾದ ಚಂದ್ರಶೇಖರ ಬಾಬು, ಗುರಪ್ಪ ಸಾಹುಕಾರ, ರಾಜು ನಂದಾಪುರ, ಕಲ್ಯಾಣ ಕುಮಾರ, ಮರಿಯಪ್ಪ ಸಿಂಗ್ರಿ, ಬಾಳೇಶ, ಬಾಲಪ್ಪ ಕುರಿ, ನಿಂಗಾರಡ್ಡೆಪ್ಪ ಸಾಹುಕಾರ, ಲಿಂಗಪ್ಪ ಹಳ್ಳದಂಡಿ, ಶೇಖರಪ್ಪ ಬಂಡಿ, ಅಮೋಜಪ್ಪ, ಅಮರೇಗೌಡ, ವಕೀಲರ ಸಂಘದ ಅಧ್ಯಕ್ಷ ಉಮೇಶ ರಾಠೋಡ, ಬಾಬಣ್ಣ ಸಾಹಕಾರ, ಗಂಗಾಧರ ವಡ್ಡರ, ಆನಂದ ಕೆರಿಹೊಲ, ಪಂಪಾಪತಿ ಕೊರ್ಲಳ್ಳಿ ಇದ್ದರು.