ಅಳವಂಡಿ ಗ್ರಾಮದಲ್ಲಿ ಆಯೋಜಿಸಿದ್ದ ಯುವ ಸಾಂಘಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಆರ್‌ಎಸ್‌ಎಸ್ ಜಿಲ್ಲಾ ವ್ಯವಸ್ಥಾಪಕ ಬೂದೇಶ ಪಟವಾರಿ ಮಾತನಾಡಿದರು. ಸಂಘದ ಪ್ರಮುಖ ಬಸವರಡ್ಡಿ ರಾಮರಡ್ಡಿ ಇದ್ದರು. 
ಕೊಪ್ಪಳ

ಯುವಕರಲ್ಲಿದೆ ದೇಶ ಮುನ್ನಡೆಸುವ ಸಾಮರ್ಥ್ಯ

ಅಳವಂಡಿ: ಏಕತೆ ಮತ್ತು ಸಾಮರಸ್ಯದ ಕೊರತೆ ಹಾಗೂ ನಾವು ಚೆನ್ನಾಗಿದ್ದರೆ ಸಾಕು ಎಂಬ ಸ್ವಾರ್ಥದಿಂದಾಗಿ ಬೇರೆಯವರು ನಮ್ಮನ್ನು ಆಳುವಂತಾಯಿತು ಎಂದು ಆರ್‌ಎಸ್‌ಎಸ್ ಜಿಲ್ಲಾ ವ್ಯವಸ್ಥಾಪಕ ಬೂದೇಶ ಪಟವಾರಿ ಹೇಳಿದರು.

ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸಿದ್ದ ಯುವ ಸಾಂಘಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.
 ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಗಿ ನಾವೆಲ್ಲರೂ ಒಂದೇ ರಾಷ್ಟ್ರದ ಮಕ್ಕಳು ಎಂಬ ಮನೋಭಾವ ಹಾಗೂ ದೇಶಪ್ರೇಮವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ದೇಶದ ಮಣ್ಣಿನ ಮಕ್ಕಳು ಒಂದಾಗಬೇಕು. ಪ್ರತಿಯೊಬ್ಬರೂ ರಾಷ್ಟ್ರಭಕ್ತಿ ಬೆಳೆಸಿಕೊಳ್ಳಬೇಕು. ನಿಜವಾದ ಆಸ್ತಿ ಯುವಕರಾಗಿದ್ದು, ದೇಶವನ್ನು ಮುನ್ನಡೆಸುವ ಶಕ್ತಿ ಮತ್ತು ಸಾಮರ್ಥ್ಯವಿದೆ. ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುವ ಮನೋಭಾವ ಮೈಗೂಡಿಸಿಕೊಳ್ಳಬೇಕು. ಸಂಘಟಿತ ಕಾರ್ಯಕ್ರಮಗಳು ಯುವಜನರಲ್ಲಿ ಶಿಸ್ತು, ನಾಯಕತ್ವ ಹಾಗೂ ದೇಶಭಕ್ತಿಯನ್ನು ಬೆಳೆಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.
ನಂತರ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಲಾಯಿತು. ಪ್ರಮುಖರಾದ ಸಿದ್ದಾರಡ್ಡಿ ಡಂಬ್ರಳ್ಳಿ, ಡಿ.ಜಿ. ಲಕ್ಕನಗೌಡರ, ಶ್ರೀನಿವಾಸ ಕಲಾದಗಿ, ಹನುಮಂತಪ್ಪ ಉಂಕಿ, ಶರಣಪ್ಪ ಜಡಿ, ಪರಶುರಾಮ ಜೋಗಿನ, ಮಹಾಂತೇಶ ಸುಣಗಾರ, ಸಂತೋಷ ಹೂಗಾರ, ಪರಶುರಾಮ, ಶರಣಪ್ಪ, ಬಸವರಾಜ, ನಾಗರಾಜ, ಮಾರುತಿ, ಮಂಜುನಾಥ, ಪ್ರವೀಣ, ನಿಂಗರಾಜ, ನಂದೀಶ, ರಾಜು, ಸುನೀಲ್, ಕೋಟೇಶ, ನೀಲಪ್ಪ ಇತರರಿದ್ದರು.