ಬೀದಿಬದಿ ವ್ಯಾಪಾರಿಗಳಿಗಾಗಿ ಗಂಗಾವತಿಯ ಗುಂಡಮ್ಮಕ್ಯಾಂಪ್ ಸಿಟಿ ಮಾರುಕಟ್ಟೆಯಲ್ಲಿ ಲೋಕ ಕಲ್ಯಾಣ ಮೇಳ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಸಮುದಾಯ ಸಂಘಟಕಿ ವಿಜಯಲಕ್ಷ್ಮೀ, ಸಂಚಾಲಕರಾದ ಶ್ರೀದೇವಿ, ಅನ್ನಪೂರ್ಣಾ, ರೇಷ್ಮಾ ಇತರರಿದ್ದರು.
- ಸಮುದಾಯ ಸಂಘಟಕಿ ವಿಜಯಲಕ್ಷ್ಮೀ ಸಲಹೆ
ಗಂಗಾವತಿ: ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆಗೆ ಪೂರಕವಾದ ನಗರಸಭೆ ಯೋಜನೆಗಳ ಬಗ್ಗೆ ನಗರದ ಗುಂಡಮ್ಮಕ್ಯಾಂಪ್ ಸಿಟಿ ಮಾರುಕಟ್ಟೆಯಲ್ಲಿ ಶುಕ್ರವಾರ ಲೋಕ ಕಲ್ಯಾಣ ಮೇಳ ಹಮ್ಮಿಕೊಳ್ಳಲಾಗಿತ್ತು.
ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಬೀದಿಬದಿ ವ್ಯಾಪಾರಿಗಳಿಗೆ ಬ್ಯಾಂಕ್ ಮತ್ತು ವಿಮೆ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.
ನಗರಸಭೆ ಸಮುದಾಯ ಸಂಘಟಕಿ ವಿಜಯಲಕ್ಷ್ಮೀ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರ ಮತ್ತು ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯದ ವ್ಯವಸ್ಥೆಯಿದ್ದು, ಜೀವನೋಪಾಯಕ್ಕೆ ಪೂರಕವಾದ ಯೋಜನೆಗಳು ನಗರಸಭೆಯಲ್ಲಿವೆ. ಖಾಸಗಿಯವರಲ್ಲಿ ಸಾಲ ಮಾಡದೇ ಇಲಾಖೆ ಯೋಜನೆಯಡಿ ಸಾಲ ಸೌಲಭ್ಯ ಪಡೆಯುವುದರಿಂದ ಆರ್ಥಿಕಾಭಿವೃದ್ಧಿ ಜತೆಗೆ ನೆಮ್ಮದಿಯ ವಹಿವಾಟು ನಡೆಸಲು ಸಾಧ್ಯ. ಅಗತ್ಯ ದಾಖಲೆಗಳೊಂದಿಗೆ ನಗರಸಭೆ ಕಚೇರಿಯಲ್ಲಿ ಸಂಪರ್ಕಿಸಿದರೆ, ಆರ್ಥಿಕಾಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದರು. ಬೀದಿಬದಿ ವ್ಯಾಪಾರಿಗಳಿಗೆ ಇರುವ ಯೋಜನೆ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸಮುದಾಯ ಸಂಚಾಲಕರಾದ ಶ್ರೀದೇವಿ, ಅನ್ನಪೂರ್ಣಾ, ರೇಷ್ಮಾ ಹಾಗೂ ನಗರಸಭೆ ಸಿಬ್ಬಂದಿ ಇದ್ದರು.