ಗಂಗಾವತಿ ಪಂಪಾನಗರ ಪಾಂಡುರಂಗ ವಿಠಲ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿ ಎ.ಕೆ.ಮಹೇಶಕುಮಾರ ಮಾತನಾಡಿದರು. ಮೇಲ್ವಿಚಾರಕಿ ಎಂ.ಜಯಲಕ್ಷ್ಮಿ, ಸೇವಾ ಪ್ರತಿನಿಧಿ ರಜಿಯಾ, ಒಕ್ಕೂಟದ ಪದಾಧಿಕಾರಿಗಳಾದ ಶಾರದಮ್ಮ, ರಸೂಲಬೀ ಇತರರಿದ್ದರು.
- ಉಪನ್ಯಾಸಕ ಎ.ಕೆ.ಮಹೇಶ ಕುಮಾರ ಹೇಳಿಕೆ
ಗಂಗಾವತಿ: ದುಶ್ಚಟಗಳ ವಿರುದ್ಧ ಜನರಲ್ಲಿ ಯುವಕರು ಜಾಗೃತಿ ಮೂಡಿಸಬೇಕಿದ್ದು, ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳುವಂತೆ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಹಾಗೂ ಸಂಪನ್ಮೂಲ ವ್ಯಕ್ತಿ ಎ.ಕೆ.ಮಹೇಶ ಕುಮಾರ ಹೇಳಿದರು.
ನಗರದ ಪಂಪಾನಗರ ಪಾಂಡುರಂಗ ವಿಠಲ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು. ಮಾದಕ ವಸ್ತು ಸೇವನೆಯಿಂದ ಅನಾರೋಗ್ಯಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ಶಕ್ತಿ ಹೀನತೆಗೆ ಕಾರಣವಾಗುವ ತಂಬಾಕು ಪ್ರೇರಿತ ವಸ್ತುಗಳಿಂದ ದೂರವಿರಲು ಸಲಹೆ ನೀಡಿದರು.
ಟ್ರಸ್ಟ್ ಆರ್ಥಿಕ ಚಟುವಟಿಕೆ ಮತ್ತು ಸಮಾಜಮುಖಿ ಕಾರ್ಯಗಳ ಬಗ್ಗೆ ಮೇಲ್ವಿಚಾರಕಿ ಎಂ.ಜಯಲಲಕ್ಷ್ಮಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಒಕ್ಕೂಟದ ಸಭೆ ಜರುಗಿತು. ತಾಲೂಕು ಲೆಕ್ಕ ಪರಿಶೋಧಕ ವಿರೂಪಾಕ್ಷಪ್ಪ, ಸಿಎಸ್‌ಸಿ ನೋಡಲ್ ಅಧಿಕಾರಿ ಸ್ವಾಮಿದಾಸ್, ಸೇವಾ ಪ್ರತಿನಿಧಿ ರಜಿಯಾ, ಒಕ್ಕೂಟದ ಪದಾಧಿಕಾರಿಗಳಾದ ಶಾರದಮ್ಮ, ರಸೂಲಬೀ, ಮರ್ದಾನಬೀ ಸೇರಿ ಸ್ವಸಹಾಯ ಸಂಘದ ಸದಸ್ಯರಿದ್ದರು.
ವಿರುಪಾಪುರ ತಾಂಡ: ನಗರದ ವಿರುಪಾಪುರ ತಾಂಡದ ಸಮುದಾಯ ಭವನದ ಆವರಣದಲ್ಲಿ ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ವಿಶ್ವ ತಂಬಾಕು ವಿರೋಧಿ ದಿನ ಆಚರಿಸಲಾಯಿತು. ಸಾಯಿನಗರ ಮತ್ತು ಸರೋಜನಗರ ಕಾರ್ಯಕ್ಷೇತ್ರ ವಲಯದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕ್ಷಯ ರೋಗ ವಿಭಾಗದ ಮೇಲ್ವಿಚಾರಕ ಎಚ್.ಮಲ್ಲಿಕಾರ್ಜುನ ಮಾತನಾಡಿ, ತಂಬಾಕಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಯೋಜನಾಧಿಕಾರಿ ಶಾಂತಾ ನಾಯ್ಕ, ಮೇಲ್ವಿಚಾರಕ ಬಿ.ನೀಲರಾಜ್, ಲೆಕ್ಕಪರಿಶೋಧಕ ಸ್ವಾಮಿದಾಸ್, ಸೇವಾ ಪ್ರತಿನಿಧಿಗಳಾದ ಶ್ವೇತಾ, ಹುಲಿಗೆಮ್ಮ, ಸ್ವ ಸಹಾಯ ಸಂಘದ ಸದಸ್ಯರಿದ್ದರು.