ವಿಶ್ವ ಆರೋಗ್ಯ ದಿನ ನಿಮಿತ್ತ ಗಂಗಾವತಿಯಲ್ಲಿ ಮಂಗಳವಾರ ಆರೋಗ್ಯ ಭಾಗ್ಯ ಜಾಗೃತಿ ರ‌್ಯಾಲಿ ನಡೆಯಿತು. ಲಯನ್ಸ್ ಕ್ಲಬ್ ತಾಲೂಕಾಧ್ಯಕ್ಷ ಡಾ.ಶಿವಕುಮಾರ ಮಾ.ಪಾಟೀಲ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಡಾ.ಎ.ಎಸ್.ಎನ್.ರಾಜು, ಡಾ.ಕೆ.ಎನ್.ಮಧುಸೂದನ್ ಇತರರಿದ್ದರು.
- ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಅಭಿಮತ
- ವಿಶ್ವ ಆರೋಗ್ಯ ದಿನಾಚರಣೆ
ಗಂಗಾವತಿ: ಆರೋಗ್ಯ ಭಾಗ್ಯ ಸರ್ವ ಭಾಗ್ಯಗಳಲ್ಲಿ ಶ್ರೇಷ್ಠವಾಗಿದ್ದು, ಆರೋಗ್ಯಕ್ಕಾಗಿ ಒಂದಾಗೋಣ, ವಿಜ್ಞಾನದೊಂದಿಗೆ ಜತೆಯಾಗೋಣ ಎಂದು ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಹೇಳಿದರು.
ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಎನ್ನೆಸ್ಸೆಸ್, ಸಮುದಾಯ ಆರೋಗ್ಯ ಕೇಂದ್ರ ಮತ್ತು ರೆಡ್ ಕ್ರಾಸ್ ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದರು. ಆರೋಗ್ಯವಂತ ಮನುಷ್ಯ ಮಾತ್ರ ಆರೋಗ್ಯವಂತ ದೇಶ ಕಟ್ಟಲು ಸಾಧ್ಯ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರ ಹಿರಿಯ ಆರೋಗ್ಯ ನಿರೀಕ್ಷಕ ಎಚ್.ಎಂ.ಗುರುರಾಜ್ ಮಾತನಾಡಿ, ನಿಯಮಿತ ವ್ಯಾಯಾಮ, ಸಮತೋಲಿತ ಪೌಷ್ಟಿಕ ಆಹಾರ, ಉತ್ತಮ ನಿದ್ರೆ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು. ಸಂಪನ್ಮೂಲ ವ್ಯಕ್ತಿ ವೀರೇಶ, ಆಪ್ತ ಸಮಾಲೋಚಕ ನರಸಿಂಹಲು, ಎನ್ನೆಸ್ಸೆಸ್ ಸಂಯೋಜಕ ವೀರೇಶ, ರೆಡ್‌ಕ್ರಾಸ್ ಘಟಕದ ಸಂಚಾಲಕ ಎಂ.ಶಂಕ್ರಪ್ಪ, ಪ್ರಾಧ್ಯಾಪಕರಾದ ರವಿಕುಮಾರ, ಡಾ.ಕೆ.ವಿರೂಪಾಕ್ಷ, ಡಾ.ಶಶಿಕುಮಾರ, ಉಪನ್ಯಾಸಕರಾದ ವೆಂಕಟರಾಜು, ಬಾಲಚಂದ್ರ, ಸಾಯಿಕುಮಾರ, ವೀರೇಶ, ಅಯ್ಯಪ್ಪ, ಈಶಪ್ಪ, ಪೆನಜಾ, ಡಾ.ರಸೂಲ್‌ಸಾಬ, ಸಿಬ್ಬಂದಿ ವಿನಾಯಕ, ಶರಣಬಸವ ಇದ್ದರು. ಇದೇ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆ ಕುರಿತು ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಅನ್‌ಲೈನ್ ಉಪನ್ಯಾಸ ನೀಡಿದರು.
ವಿಶ್ವ ಆರೋಗ್ಯ ದಿನ ನಿಮಿತ್ತ ಭಾರತೀಯ ವೈದ್ಯಕೀಯ ಸಂಘ, ಭಾರತೀಯ ತಜ್ಞ ವೈದ್ಯರ ಸಂಘ ಮತ್ತು ಲಯನ್ಸ್ ಕ್ಲಬ್ ತಾಲೂಕು ಘಟಕದಿಂದ ಆರೋಗ್ಯಭಾಗ್ಯ ಜಾಗೃತಿ ರ‌್ಯಾಲಿ ನಗರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಗರಾದ್ಯಂದ ಸಂಚರಿಸಿದ ರ‌್ಯಾಲಿಯಲ್ಲಿ ಆರೋಗ್ಯ ಭಾಗ್ಯದ ಸೂತ್ರಗಳನ್ನು ಸಾರ್ವಜನಿಕರಿಗೆ ತಿಳಿಸಲಾಯಿತು. ಲಯನ್ಸ್ ಕ್ಲಬ್ ತಾಲೂಕಾಧ್ಯಕ್ಷ ಡಾ.ಶಿವಕುಮಾರ ಮಾ.ಪಾಟೀಲ್ ಮಾತನಾಡಿದರು. ವಿವಿಧ ಸಂಘಟನೆ ಪದಾಧಿಕಾರಿಗಳಾದ ಡಾ.ಎ.ಎಸ್.ಎನ್. ರಾಜು, ಡಾ.ಮಲ್ಲನಗೌಡ ಪಾಟೀಲ್, ಡಾ.ಅನಿತಾ, ಡಾ.ಚೇತನ, ಡಾ.ಕೆ.ಎನ್.ಮಧುಸೂದನ್, ಡಾ.ಸತೀಶ ರಾಯ್ಕರ್, ಡಾ. ಸಿಂಧು, ಡಾ.ಅರವಿಂದ, ಡಾ.ನಾಗರಾಜ್, ಜಂಬಣ್ಣ ಐಲಿ, ಶಿವಪ್ಪ ಗಾಳಿ, ಡಾ.ಕಿರಣ್ ಇತರರಿದ್ದರು.