ಕೊಪ್ಪಳದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆಯನ್ನು ನ್ಯಾ.ಮಹಾಂತೇಶ ದರಗದ ಉದ್ಘಾಟಿಸಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯೆ ಜಿ.ಇ.ಸೌಭಾಗ್ಯಲಕ್ಷಿ$್ಮ, ಸದಸ್ಯ ರಾಜು ಎನ್.ಮೇತ್ರಿ, ಪ್ರಾಚಾಯೆರ್ ಉಷಾದೇವಿ, ಉಪನ್ಯಾಸಕಿ ಸಾವಿತ್ರಿ ಮುಜುಮದಾರ ಇದ್ದರು.
- ವಿವರ ಪರಿಶೀಲಿಸಿ ಉತ್ಪನ್ನ ಖರೀದಿಸಿ
- ನ್ಯಾ.ಮಹಾಂತೇಶ ದರಗದ ಸಲಹೆ
ಕೊಪ್ಪಳ: ಗ್ರಾಹಕರು ವಸ್ತು ಖರೀದಿಸುವ ಮುನ್ನ ವಿವರ ಸರಿಯಾಗಿ ಪರಿಶೀಲಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್.ದರಗದ ಸಲಹೆ ನೀಡಿದರು.
ನಗರದ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆಯಲ್ಲಿ ಮಾತನಾಡಿದರು.
ಉತ್ಪನ್ನ ಗುಣಮಟ್ಟ, ಸುರತವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಿ. ಮೋಸ, ತಪ್ಪು ತೂಕ, ಅವಧಿ ಮೀರಿದ ವಸ್ತುಗಳ ವಿರುದ್ಧ ತಕ್ಷಣ ದೂರು ನೀಡಿ. ಎಂಆರ್ಪಿಗಿಂತ ಅಧಿಕ ಹಣ ವಸೂಲಿ ಮಾಡುವವರನ್ನು ಪ್ರಶ್ನಿಸಿ. ಪ್ರಜ್ಞಾವಂತರು ನಿಮ್ಮ ಸುತ್ತಮುತ್ತ ನಡೆವ ಅನ್ಯಾಯ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ. ಅಂದಾಗ ಬದಲಾವಣೆ ಸಾಧ್ಯ. ಗ್ರಾಹಕ ಸಂರಕ್ಷಣಾ ಕಾಯ್ದೆ&2019 ಗ್ರಾಕರಿಗೆ ರಕ್ಷಣೆ ನೀಡುತ್ತದೆ. ಮೋಸ, ತಪ್ಪು ಜಾಹೀರಾತು ಹಾಗೂ ಕಳಪೆ ಉತ್ಪನ್ನಗಳ ವಿರುದ್ಧ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯೆ ಜಿ.ಇ.ಸೌಭಾಗ್ಯಲಕ್ಷಿ$್ಮ ಮಾತನಾಡಿ, ಮಾರುಕಟ್ಟೆಯಲ್ಲಿ ದೊರೆವ ಪ್ರತಿಯೊಂದು ಉತ್ಪನ್ನವೂ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರಬೇಕು. ಗ್ರಾಹಕರು ತಾವು ಬಳಸುವ ವಸ್ತುಗಳ ಬಗ್ಗೆ ಭಯಮುಕ್ತರಾದಾಗ ಮಾತ್ರ ಸದೃಢ ಆರ್ಥಿಕತೆ ನಿಮಾರ್ಣವಾಗಲು ಸಾಧ್ಯ ಎಂದರು. ಸುರಕ್ಷಿತ ಉತ್ಪನ್ನಗಳು, ಆತ್ಮವಿಶ್ವಾಸದ ಗ್ರಾಹಕರು ಎಂಬ ಘೋಷವಾಕ್ಯ ಕುರಿತು ಮತ್ತು ಕಾನೂನಿನ ಕುರಿತು ಅರಿವು ಮೂಡಿಸಿದರು.
ಆಯೋಗ ಸದಸ್ಯ ರಾಜು ಎನ್. ಮೇತ್ರಿ ಮಾತನಾಡಿ, ಖರೀದಿಸುವ ಪ್ರತಿ ವಸ್ತುಗಳಲ್ಲಿ ಸಿದ್ದಪಡಿಸಿದ ದಿನಾಂಕ ಮತ್ತು ಎಷ್ಟು ದಿನ ಬಳಸಬಹುದು ಎಂಬುದನ್ನು ಗ್ರಾಹಕರು ತಿಳಿದಿರಬೇಕು. ಮಾರಾಟ ಮಾಡುವವರು ವಸ್ತುಗಳ ನಿಖರ ಮಾಹಿತಿ ನೀಡಬೇಕು. ಲಾಭದ ಆಸೆಗೆ ಮನಬಂದಂತೆ ವ್ಯಾಪಾರ ಮಾಡಬಾರದು. ಅಂತಹ ಅನ್ಯಾಯ ನಿಮ್ಮ ಕಣ್ಣಮುಂದೆ ಕಂಡುಬಂದರೆ ಪ್ರಶ್ನೆ ಮಾಡಬೇಕು ಎಂದರು.
ನ್ಯಾಯವಾದಿ ಸಾವಿತ್ರಿ ಮುಜುಮದಾರ ವಿಶೇಷ ಉಪನ್ಯಾಸ ನೀಡಿದರು. ಆಹಾರ ಇಲಾಖೆ ಉಪನಿರ್ದೇಶಕ ವಿಶ್ವನಾಥಗೌಡ ಎಂ.ಎನ್., ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದ ಪ್ರಾಚಾಯೆರ್ ಉಷಾದೇವಿ ಎಸ್. ಹಿರೇಮಠ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ರವಿಕುಮಾರ್ ಇತರರಿದ್ದರು.