ಹೊಸಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶುಕ್ರವಾರ ಜಿಲ್ಲೆಯ ವಸತಿ ಶಾಲೆಗಳ ವಿಜ್ಞಾನ ಮತ್ತು ಗಣಿತ ವಿಷಯ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಎನ್‌ಸಿಆರ್‌ಟಿ ಪಠ್ಯದ ತರಬೇತಿ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿ ಸದಾನಂದ ಪಾಟೀಲ್ ಉದ್ಘಾಟಿಸಿದರು. ಪ್ರಾಚಾರ್ಯ ವಿರೂಪಾಕ್ಷಪ್ಪ ಹನಮಶೆಟ್ಟಿ, ಶಿಕ್ಷಕರಾದ ಸಿದ್ದಯ್ಯ ಹಿರೇಮಠ, ವೀರೇಶ ಕನಕಗಿರಿ, ಪುರುಷೋತ್ತಮ ಪೂಜಾರ್, ಜಹೀರ್ ಅಹ್ಮದ್, ರಾಜೇಶ್ವರಿ ಬಿರಾದಾರ್, ಜಿಲ್ಲಾ ಗಣಿತ ಶಿಕ್ಷಕರ ಸಂಘದ ಅಧ್ಯಕ್ಷೆ ಭಾಗ್ಯಶ್ರೀ, ಈಶ್ವರ ಪತ್ತಾರ್ ಇದ್ದರು.
- ಸಂಪನ್ಮೂಲ ವ್ಯಕ್ತಿ ಸದಾನಂದ ಪಾಟೀಲ್ ಸಲಹೆ
- ವಸತಿ ಶಾಲೆಗಳ ವಿಜ್ಞಾನ-ಗಣಿತ ಶಿಕ್ಷಕರಿಗೆ ಕಾರ್ಯಾಗಾರ
ಯಲಬುರ್ಗಾ: ಇಂದಿನ ಶಿಕ್ಷಣ ಪದ್ಧತಿ ಮಗು ಕೇಂದ್ರೀತವಾಗಿದ್ದು, ಶಿಕ್ಷಕರು ಮಕ್ಕಳ ಆಸಕ್ತಿ-ಅಭಿರುಚಿ ಅರಿತು ಬೋಧನೆ ಮಾಡಬೇಕು ಎಂದು ಸಂಪನ್ಮೂಲ ವ್ಯಕ್ತಿ ಸದಾನಂದ ಪಾಟೀಲ್ ಹೇಳಿದರು.
ಹೊಸಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶುಕ್ರವಾರ ಕ್ರೈಸ್ ವತಿಯಿಂದ ಜಿಲ್ಲೆಯ ವಸತಿ ಶಾಲೆಗಳ ವಿಜ್ಞಾನ ಮತ್ತು ಗಣಿತ ವಿಷಯ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಎನ್‌ಸಿಆರ್‌ಟಿ ಪಠ್ಯದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸುವ ರೀತಿಯಲ್ಲಿ ಬೋಧನಾ ಕೌಶಲ ರೂಢಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಸಂಪನ್ಮೂಲ ವ್ಯಕ್ತಿ ವಿಜಯಕುಮಾರ್ ದೊಡ್ಡಮನಿ ಮಾತನಾಡಿ, ಶಿಕ್ಷಣ ಕ್ಷೇತದಲ್ಲಿನ ಬದಲಾವಣೆಗೆ ತಕ್ಕಂತೆ ಶಿಕ್ಷಕರು ನವೀನ ಬೋಧನಾ ವಿಧಾನ ಅಳವಡಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ವಿರೂಪಾಕ್ಷಪ್ಪ ಹನಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಸಿದ್ದಯ್ಯ ಹಿರೇಮಠ, ವೀರೇಶ ಕನಕಗಿರಿ, ಪುರುಷೋತ್ತಮ ಪೂಜಾರ್, ಜಹೀರ್ ಅಹ್ಮದ್, ರಾಜೇಶ್ವರಿ ಬಿರಾದಾರ್, ಜಿಲ್ಲಾ ಗಣಿತ ಶಿಕ್ಷಕರ ಸಂಘದ ಅಧ್ಯಕ್ಷೆ ಭಾಗ್ಯಶ್ರೀ, ಈಶ್ವರ ಪತ್ತಾರ್, ಎಲ್ಲ ವಸತಿ ಶಾಲೆಗಳ ವಿಜ್ಞಾನ ಹಾಗೂ ಗಣಿತ ವಿಷಯ ಶಿಕ್ಷಕರು ಭಾಗವಹಿಸಿದ್ದರು.