ಹುಲಿಗಿಯ ತುಂಗಭದ್ರಾ ನದಿ ತಟದಲ್ಲಿ ಸ್ವಚ್ಛತಾ ಹಾಗೂ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ.ಗೊಂಡಬಾಳ, ಅಂಗಳ ಸಂಸ್ಥೆಯ ಜ್ಯೋತಿ ಹಿಟ್ನಾಳ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ.ಗೊಂಡಬಾಳ, ಪ್ರಮುಖರಾದ ನಾಗರತ್ನಾ, ಕಾವೇರಿ, ಕೆಂಚಪ್ಪ ಇತರರಿದ್ದರು. 
ಕೊಪ್ಪಳ

ಪರಿಸರ ಸ್ವಚ್ಛತೆಗೆ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ

ಪರಿಸರ ಸ್ವಚ್ಛತೆಗೆ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿ

ಕೊಪ್ಪಳ: ನದಿ, ಪರಿಸರ ಮತ್ತು ಸಮಾಜ ಉಳಿಸಲು ಸಾರ್ವಜನಿಕರು, ಸಂಘಟನೆಗಳು ಹಾಗೂ ಇಲಾಖೆಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ.ಗೊಂಡಬಾಳ ಹೇಳಿದರು.
ತಾಲೂಕಿನ ಐತಿಹಾಸಿಕ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ನಮ್ಮ ನದಿ ನಮ್ಮ ಹೊಣೆ ಘೋಷಣೆಯಡಿ ಅಂಗಳ ಟ್ರಸ್ಟ್ ಹಾಗೂ ವಿಸ್ತಾರ ಸಂಸ್ಥೆಯಿಂದ ತುಂಗಭದ್ರಾ ನದಿ ತಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಹಾಗೂ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ನದಿ ತೀರದಲ್ಲಿ ಮಾಹಿತಿ ಫಲಕ, ಕಸ ವಿಲೇವಾರಿ ಡಬ್ಬಿ ಹಾಗೂ ಬಟ್ಟೆ ಸಂಗ್ರಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಎಂದರು. ನಂತರ ಸಂಸದ ರಾಜಶೇಖರ ಹಿಟ್ನಾಳ ಮತ್ತು ಪ್ರಾಧಿಕಾರ ಸದಸ್ಯರನ್ನು ಭೇಟಿ ಮಾಡಿ ಅಗತ್ಯ ಸೌಲಭ್ಯ ಒದಗಿಸುವಂತೆ ಮನವಿ ಸಲ್ಲಿಸಿದರು.
ಅಂಗಳ ಸಂಸ್ಥೆಯ ಜ್ಯೋತಿ ಹಿಟ್ನಾಳ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ.ಗೊಂಡಬಾಳ, ಪ್ರಮುಖರಾದ ನಾಗರತ್ನಾ, ಕಾವೇರಿ, ಕೆಂಚಪ್ಪ, ಸುಜಾತಾ, ಜ್ಯೋತಿ, ಶಂಕ್ರವ್ವ ಇತರರಿದ್ದರು.