ಭೀಮವ್ವ ಕುರಿ 
ಕೊಪ್ಪಳ

ನನ್ನ ಗಂಡನದು ಕೊಲೆ ಎಂದ ಮಹಿಳೆ

ಪ್ರಮುಖ ಮುಖ್ಯಾಂಶಗಳು

  • ಪತ್ನಿ ಭೀಮವ್ವ ಕುರಿ ಗಂಭೀರ ಆರೋಪ
ಕೊಪ್ಪಳ: ದಷ್ಟಪುಷ್ಟ ದೇಹದ ನನ್ನ ಪತಿ ಕೇವಲ 3 ಅಡಿ ಆಳದ ಗುಂಡಿಯಲ್ಲಿ ಬಿದ್ದು ಸಾಯಲು ಸಾಧ್ಯವಿಲ್ಲ. ಇದು ರಾಜಕೀಯ ದ್ವೇಷಕ್ಕಾಗಿ ನಡೆದ ವ್ಯವಸ್ಥಿತ ಕೊಲೆ ಎಂದು ಮೃತ ಗ್ಯಾನಪ್ಪ ಕುರಿ ಅವರ ಪತ್ನಿ ಭೀಮವ್ವ ಕುರಿ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕುಷ್ಟಗಿ ತಾಲೂಕಿನ ಹಿರೇತೆಮ್ಮಿನಾಳ ಗ್ರಾಮದ ನಿವಾಸಿ ಗ್ಯಾನಪ್ಪ ಕುರಿ ನನ್ನ ಗಂಡನು ಫೆ. 21 ರಂದು ಮೃತನಾಗಿದ್ದು. ಅದು ಆಕಸ್ಮಿಕ ಸಾವಲ್ಲ. ಅದು ಕೊಲೆಯಾಗಿದೆ. ಕಳೆದ ಗ್ರಾಂಪಂ ಚುನಾವಣೆಯಲ್ಲಿ 3 ಮತಗಳಿಂದ ಸೋತಿದ್ದ ನನ್ನ ಪತಿ, ಈ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಲು ಸಿದ್ಧರಾಗಿದ್ದರು. ಇದನ್ನು ಸಹಿಸದ ಎದುರಾಳಿಗಳು ಅವರನ್ನು ಕೊಲೆ ಮಾಡಿದ್ದಾರೆ. ಶವದ ಮುಖದ ಮೇಲೆ ಕಲ್ಲಿನಿಂದ ಜಜ್ಜಿದ ಗಾಯಗಳಿದ್ದು, ಕಾಲು ಮುರಿದು ಗುಂಡಿಯಲ್ಲಿ ತುರುಕಲಾಗಿದೆ. ಪೋಲಿಸ್​ ಠಾಣೆಗೆ ಹೋದರೆ ಅಧಿಕಾರಿಗಳು ನಮ್ಮನ್ನು ಅವಮಾನಿಸುತ್ತಿದ್ದಾರೆ. ಸಾಕ್ಷಿ ತನ್ನಿ ಎಂದು ಗದರಿಸುವುದಲ್ಲದೆ, ಕಾಯಿ-&ಕುಂಕುಮ ತನ್ನಿ ಎಂದು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಅವರು ನೋವು ತೋಡಿಕೊಂಡರು.
ಈ ಕೃತ್ಯಕ್ಕೆ ಬಿಜೆಪಿ ಮುಖಂಡ ರಾಮನಗೌಡ ಬಿಂಗಿ ಕುಮ್ಮಕ್ಕು ನೀಡಿದ್ದಾರೆ ಹಾಗೂ ಗ್ಯಾನಪ್ಪ ಸಂಡೂರು ಸೇರಿದಂತೆ ಅವರ ಕುಟುಂಬದ ಐವರ ಮೇಲೆ ಬಲವಾದ ಅನುಮಾನವಿದೆ ಎಂದು ದೂರಿದರು. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವೀರುಪಣ್ಣ ಕುರಿ, ಅಮರಪ್ಪ ಬ್ಯಾಗಿ, ಮಂಜುನಾಥ ಕುರಿ ಹಾಗೂ ಯಲ್ಲಪ್ಪ ಕುರಿ ಇದ್ದರು.