ಕೊಪ್ಪಳ ತಾಲೂಕಿನ ಕರ್ಕಿಹಳ್ಳಿಯ ಶ್ರೀ ಕ್ಷೇತ್ರ ಮೃತ್ಯುಂಜಯೇಶ್ವರ ಜಾತ್ರಾಮಹೋತ್ಸವ ನಿಮಿತ್ತ ರಾಯಚೂರಿನಿಂದ ಹಮ್ಮಿಕೊಂಡಿದ್ದ ಶ್ರೀ ಶಿವ ಚಿದಂಬರ ದಿಂಡಿ ಯಾತ್ರೆಯನ್ನು ಗಂಗಾವತಿ ತಾಲೂಕಿನ ಮರಳಿಯಲ್ಲಿ ಸ್ವಾಗತಿಸಲಾಯಿತು. ರಾಯಚೂರಿನ ರಾಮಾಚಾರ್ ಜೋಶಿ, ಶ್ಯಾಮಾಚಾರ್ ಜೋಶಿ, ಪಿಎಸ್ಸೆಸ್ಸೆನ್ ಮಾಜಿ ನಿರ್ದೇಶಕ ರಮೇಶ ಕುಲ್ಕರ್ಣಿ ಇತರರಿದ್ದರು.
- ಶ್ರೀ ಕ್ಷೇತ್ರ ಮೃತ್ಯುಂಜಯೇಶ್ವರ ಜಾತ್ರಾಮಹೋತ್ಸವ
- ಲೋಕಕಲ್ಯಾಣಾರ್ಥ ಸಂಕೀರ್ತನೆ
ಗಂಗಾವತಿ: ಕೊಪ್ಪಳ ತಾಲೂಕಿನ ಕರ್ಕಿಹಳ್ಳಿಯ ಶ್ರೀ ಕ್ಷೇತ್ರ ಮೃತ್ಯುಂಜಯೇಶ್ವರ ಜಾತ್ರಾಮಹೋತ್ಸವದ ನಿಮಿತ್ತ ರಾಯಚೂರಿನಿಂದ ಹಮ್ಮಿಕೊಂಡಿದ್ದ ಶ್ರೀ ಶಿವ ಚಿದಂಬರ ದಿಂಡಿ ಯಾತ್ರೆಯನ್ನು ತಾಲೂಕಿನ ಮರಳಿಯಲ್ಲಿ ಶನಿವಾರ ಸ್ವಾಗತಿಸಲಾಯಿತು.
ಪ್ರತಿ ವರ್ಷ ದಿಂಡಿಯಾತ್ರೆ ರಾಯಚೂರಿನಿಂದ ಕೊಪ್ಪಳ ತಾಲೂಕಿನ ಮೃತ್ಯುಂಜಯೇಶ್ವರ ದೇವಾಲಯದವರಿಗೂ ನಡೆಯಲಿದ್ದು,ದಾರಿಯುದ್ದಕ್ಕೂ ಶ್ರೀ ಶಿವ ಚಿದಂಬರ ನಾಮಸ್ಮರಣೆ, ಲೋಕಕಲ್ಯಾಣಾರ್ಥ ಸಂಕೀರ್ತನೆ ಮತ್ತು ನಿರಂತರ ಭಜನೆ ನಡೆಯಲಿದೆ.
ಮರಳಿ ಗ್ರಾಮಕ್ಕೆ ಅಗಮಿಸಿದ ಪಾದಯಾತ್ರೆ ತಂಡವನ್ನು ತಾಲೂಕು ವಿಪ್ರ ಸಮಾಜದ ಮುಖಂಡರು ಸ್ವಾಗತಿಸಿದ್ದು, ಪಿಎಸ್ಸೆಸ್ಸೆನ್ ಮಾಜಿ ನಿರ್ದೇಶಕ ರಮೇಶ ಕುಲ್ಕರ್ಣಿ ನಿವಾಸದಲ್ಲಿ ವಿಶೇಷ ಪೂಜೆ, ಉಪನ್ಯಾಸ, ಭಜನೆ ಮತ್ತು ಲಹಾರ ವ್ಯವಸ್ಥೆ ಮಾಡಲಾಗಿತ್ತು. ದಿಂಡಿ ಯಾತ್ರೆ ಉದ್ದೇಶ, ಮೃತ್ಯುಂಜಯೇಶ್ವರ ಜಾತ್ರೆಯ ವೈಶಿಷ್ಟ್ಯತೆ ಕುರಿತು ರಾಯಚೂರಿನ ರಾಮಾಚಾರ್ ಜೋಶಿ, ಶ್ಯಾಮಾಚಾರ್ ಜೋಶಿ ತಿಳಿಸಿದರು.
ಶ್ರೀ ಯೋಗೀಶ್ವರ ಯಾಜ್ಞವಲ್ಕ ದೇವಾಲಯದ ಸಮಿತಿ ಅಧ್ಯಕ್ಷ ಮುರಳೀಧರ ಕುಲ್ಕರ್ಣಿ, ಸದಸ್ಯರಾದ ಗುರುರಾಜ್ ಚಿರ್ಚನಗುಡ್ಡ, ರಮಾಕಾಂತ ಅಲಬನೂರ್, ಪ್ರಮುಖರಾದ ಗಿರಿಧರ್ ಕುಲ್ಕರ್ಣಿ, ಶೇಷಗಿರಿ ಕುಲ್ಕರ್ಣಿ, ಗಿರಿಜಾ, ದಿವ್ಯಾ, ಸುಶೀಲಾ ದಿಕ್ಷೀತ್, ಅನುಪಮಾ, ಸವಿತಾ, ರಂಜನಾದೇಸಾಯಿ, ರಮಾಬಾಯಿ ಇತರರಿದ್ದರು.