ಕನಕಗಿರಿಯ ಶ್ರೀ ಚನ್ನರುದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಪಪಂ ಅಧ್ಯಕ್ಷೆ ತನುಶ್ರೀ, ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಗುಗ್ಗಳ ಶೆಟ್ಟರ್, ಸದಸ್ಯರಾದ ಪ್ರಶಾಂತ್ ಪ್ರಭು ಶೆಟ್ಟರ್, ಮೃತ್ಯುಂಜಯ ಭೂಸನೂರ ಮಠ, ವಾಗೀಶ ಹಿರೇಮಠ, ಬಸವರಾಜ ಸ್ವಾಮಿ ಹಿರೇಮಠ ಇದ್ದರು. 
ಕೊಪ್ಪಳ

ಉನ್ನತ ಗುರಿಯೊಂದಿಗೆ ಅಧ್ಯಯನ ಮಾಡಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಡಾ. ಚನ್ನಮಲ್ಲ ಸ್ವಾಮೀಜಿ ಸಲಹೆ
ಕನಕಗಿರಿ: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಡಾ. ಚನ್ನಮಲ್ಲ ಸ್ವಾಮೀಜಿ ಹೇಳಿದರು.
ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಉನ್ನತ ಗುರಿಯೊಂದಿಗೆ ಅಧ್ಯಯನ ಮಾಡಿ ಒಳ್ಳೆಯ ಹುದ್ದೆ ಹಿಡಿಯಲು ಮುಂದಾಗಬೇಕು. ಗುರು ಹಿರಿಯರಿಗೆ ಗೌರವ ಕೊಡಬೇಕೆಂದು ತಿಳಿಸಿದರು.
ಸಂಸ್ಥೆಯ ಸದಸ್ಯ ಡಾ. ಸಿದ್ದರಾಮೇಶ್ವರ ಮಾತನಾಡಿ, ವಿದ್ಯಾರ್ಥಿಗಳು ಸಮಯದ ಸದುಪಯೋಗ ಪಡೆದು ಉನ್ನತ ಸಾಧನೆ ಮಾಡಬೇಕು. ಈ ಮೂಲಕ ಪಾಲಕರಿಗೆ ಹೆಸರು ತರಬೇಕು ಎಂದರು.
ಇದೆ ವೇಳೆ ಅಗ್ನಿವೀರ್‌ಗೆ ಆಯ್ಕೆಯಾದ ಶಾಲೆಯ ಹಳೇ ವಿದ್ಯಾರ್ಥಿ ಮಹಾಲಿಂಗರಾಯ ಅವರನ್ನು ಸನ್ಮಾನಿಸಲಾಯಿತು. ಪಪಂ ಅಧ್ಯಕ್ಷೆ ತನುಶ್ರೀ, ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಗುಗ್ಗಳ ಶೆಟ್ಟರ್, ಸದಸ್ಯರಾದ ಪ್ರಶಾಂತ್ ಪ್ರಭು ಶೆಟ್ಟರ್, ಮೃತ್ಯುಂಜಯ ಭೂಸನೂರ ಮಠ, ವಾಗೀಶ ಹಿರೇಮಠ, ಬಸವರಾಜ ಸ್ವಾಮಿ ಹಿರೇಮಠ ಇತರರಿದ್ದರು.