ಸಿದ್ದಾಪುರ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷೆ ಶಿವಗಂಗಾ ಪಂಪಾಪತಿ ಅವರು ಸದಸ್ಯರು ಹಾಗೂ ಸಿಬ್ಬಂದಿ ಜತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿರುವುದು. 
ಕೊಪ್ಪಳ

ಸಿದ್ದಾಪುರ ಗ್ರಾಪಂನಲ್ಲಿ ವಿವಾಹ ವಾರ್ಷಿಕೊತ್ಸವ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಗ್ರಾಮಾಡಳಿತಕ್ಕೆ ತಾಪಂ ಇಒ ಲಕ್ಷ್ಮೀದೇವಿ ನೋಟಿಸ್
ಸಿದ್ದಾಪುರ: ಇಲ್ಲಿನ ಗ್ರಾಪಂ ಕಚೇರಿಯಲ್ಲಿ ಮೇ 15ರಂದು ಅಧ್ಯಕ್ಷೆ ಶಿವಗಂಗಾ ಪಂಪಾಪತಿ ಅವರು ಕೆಲ ಸದಸ್ಯರು, ಸಿಬ್ಬಂದಿ ಜತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ ಎಂದು ತಾಪಂ ಇಒ ಲಕ್ಷ್ಮೀದೇವಿ ಮೇ 18ರಂದು ಗ್ರಾಮಾಡಳಿತಕ್ಕೆ ನೋಟಿಸ್ ನೀಡಿದ್ದಾರೆ.
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಗ್ರಾಪಂ ಕಚೇರಿ ಸಾರ್ವಜನಿಕ ಸಂಸ್ಥೆಯಾಗಿದೆ. ಕಚೇರಿ ಕಟ್ಟಡ, ಪೀಠೋಪಕರಣ ಹಾಗೂ ಅಲ್ಲಿನ ಸೌಲಭ್ಯಗಳು ಸಾರ್ವಜನಿಕ ಆಡಳಿತ, ಪಂಚಾಯಿತಿ ಸಭೆಗಳು ಮತ್ತು ಅಭಿವೃದ್ಧಿ ಕೆಲಸಗಳ ಉದ್ದೇಶಕ್ಕೆ ಮಾತ್ರ ಸೀಮಿತವಾಗಿರುತ್ತವೆ. ವೈಯಕ್ತಿಕ ಬಳಕೆಗೆ ಅವಕಾಶವಿಲ್ಲ. ಗ್ರಾಪಂ ಅಧ್ಯಕ್ಷೆ, ಸದಸ್ಯರು ಮತ್ತು ಗ್ರಾಪಂ ಸಿಬ್ಬಂದಿ ಜತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ.
ಆಚರಣೆಯ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ನೋಟಿಸ್ ನೀಡುವ ಇಒ, ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಪಿಡಿಒಗೆ ಸೂಚಿಸಿದ್ದಾರೆ.