- ಸಿಎಂ ಡಿಕೆ ಶಿವಕುಮಾರ್ ಹೇಳಿಕೆ
- ಒಗ್ಗಟ್ಟಿನ ಮಂತ್ರ ಜಪಿಸಿದ ಡಿಕೆಶಿ
ಕೊಪ್ಪಳ: ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಹಿತದೃಷ್ಟಿಯಿಂದ ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಕೇಂದ್ರ ಸರ್ಕಾರವೂ ಬೆಂಬಲ ನೀಡಿದೆ. ಅಭಿವೃದ್ಧಿ ವಿಫಿಯದಲ್ಲಿ ನಾವೆಲ್ಲ ಒಂದೇ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಮುನಿರಾಬಾದ್ ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೊಂದು ಐತಿಹಾಸಿಕ ಕ್ಷಣ. 2024ರ ಆ.10ರಂದು 19ನೇ ಗೇಟ್ ಕೊಚ್ಚಿ ಹೋಗಿ ಅನಾಹುತ ಆಯಿತು. ತಕ್ಷಣ ಓಡಿಬಂದೆ.10-15ದಿನದಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಸಿ ಭತ್ತದ ಕಣಜ ಉಳಿಸುವ ಕೆಲಸ ಮಾಡಿದೆ. ವಿಪಕ್ಷದವರು ಟೀಕಿಸಿದರು.ಶಾರದಾಮಾತೆ, ಅಜ್ಜಯ್ಯ, ಹಂಪಿ ವಿರೂಪಾಕ್ಷೇಶ್ವರ, ರಾಘವೇಂದ್ರ ಸ್ವಾಮಿ ಆಶೀರ್ವಾದದಿಂದ ಓ ಸಾಧನೆ ಸಾಧ್ಯವಾಗಿದೆ. ಕೊಟ್ಟ ಮಾತಿನಂತೆ 33 ಕ್ರಸ್ಟ್ ಗೇಟ್ ಬದಲಾವಣೆ ಮಾಡಿದ್ದೇವೆ. ನಾನಾಗ ನೀರಾವರಿ ಸಚಿವನಾಗಿದ್ದೆ. ಈಗ ಸಿಎಂ ಆಗಿರುವೆ. ಆದರೂ ನಾನು ಜನರ ಸೇವಕ. ಟಿಬಿ ಡ್ಯಾಂ ಕಾಪಾಡಿದ್ದೇವೆ.
ಇದೊಂದು ಐತಿಹಾಸಿಕ ಕ್ಷಣ. ಮೂರು ರಾಜ್ಯದ ಸಿಎಂಗಳು ಏಕತೆಯಿಂದ ಈ ಕ್ಷಣಕ್ಕೆ ಸಾಕ್ಷಿಯಾಗಿದ್ದೇವೆ. ಹೊಸದೊಂದು ಇತಿಹಾಸ ನಿರ್ಮಿಸಿದ್ದೇವೆ. ನಾವೆಲ್ಲ ಇತಿಹಾಸ ಓದುವಯದಿಲ್ಲ. ಇತಿಹಾಸ ನಿರ್ಮಿಸು ಶಪಥ ಮಾಡಿದ್ದೇವೆ. ಜೊತೆಗೂಡುವುದು ಆರಂಭ, ಚರ್ಚಿ ಪ್ರಗತಿ, ಕೆಲಸ ಮಾಡಿದರೆ ಯಶಸ್ಸು. ಇದಕ್ಕೆ ಈ ಕಾರ್ಯಕ್ರಮ ಸಾಕ್ಷಿ.
ನೀರು ಹೇಗೆ ಉಳಿಸಬೇಕು, ಡ್ಯಾಂ ರಕ್ಷಣೆ ಮಾಡಬೇಕು. ಹೂಳು ತೆಗೆಯಬೇಕು.ನವಲಿ ಜಲಾಶಯ ನಿರ್ಮಿಸಬೇಕು. ನಾವೆಲ್ಲ ಒಮ್ಮತದ ನಿರ್ಧಾರ ಮಾಡಿ ರೈತರ ಹಿತ ಕಾಯಲು ನಿರ್ಧರಿಸಿದ್ದೇವೆ. ಒಂದು ಗಂಟೆ ಸಭೆ ನಡೆಸಿ ಕಾರ್ಯಗತ ಮಾಡುತ್ತೇವೆ. ನಮ್ಮ ನೀರು ನಮ್ಮ ಹಕ್ಕು. ಮೂರು ರಾಜ್ಯಗಳ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ.
ಮೂರು ರಾಜ್ಯಗಳ ನೀರಾವರಿ ಯೋಜನೆ, ಕೃಫಿ್ಣಾ, ಕಾವೇರಿ, ತುಂಗಭದ್ರಾ ನದಿ ಜೋಡಣೆ ಮಾಡುವ ಮೂಲಕ ರಾಜ್ಯಗಳ ಹಿತಕಾಯಬೇಕು. ದೇವರು ವರ ಅಥವಾ ಶಾಪ ಕೊಡುವುದಿಲ್ಲ. ಅವಕಾಶ ಕೊಡುತ್ತಾನೆ. ಅವಕಾಶ ಬಳಸಿ ಜನರ ಸೇವೆ ಮಾಡಲು ಸಿದ್ಧ. ಸಿಎಂ ಆದ ನಂತರ ಇದು ಎರಡನೇ ಮಹತ್ತರ ಕಾರ್ಯಕ್ರಮ. ಒಂದು ಆರೋಗ್ಯ ಕಾರ್ಯಕ್ರಮ. ಇದು ರೈತರ ಬದುಕು ಹಸನಾಗಿಸುವ ಕಾರ್ಯಕ್ರಮ. ರೈತರನ್ನು ಬದುಕಿಸಬೇಕು. ಭತ್ತದ ಕಣಜ ಉಳಿಸಬೇಕಿದೆ. ಅಭಿವೃದ್ಧಿ ವಿಫಿಯದಲ್ಲಿ ನಾವೆಲ್ಲ ಒಂದೇ. ಮೂರು ರಾಜ್ಯಗಳ ಹಿತದೃಷ್ಟಿಯಿಂದ ಚರ್ಚಿಸಿ ನಿರ್ಧರಿಸಿದ ವಿಫಿಯವನ್ನು ಕೇಂದ್ರ ಜಲಶಕ್ತಿ ಸಚಿವರು ಪ್ರಕಟಿಸುವರು ಎಂದರು.