ಆನಂದಗಲ್‌ನಲ್ಲಿ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಶಶಿರೇಖಾ, ಭವಾನಿ, ರಂಜಿತಾ, ದುದುನಿ, ರಶ್ಮಿ ಬೆಂಗಳೂರು, ಶಿವಮೂರ್ತಿ ಕುಷ್ಟಗಿ, ಹನುಮೇಶ ನಾಯಕ, ಯಲ್ಲಪ್ಪ ಆಲಮಟ್ಟಿ, ಹಾಲೇಶ ಮೇವುಂಡಿ, ಶರಣಬಸವ ಹೊನ್ನಳ್ಳಿ, ದುರುಗಪ್ಪ ನಾಯಕ, ಶೇಖರಪ್ಪ ತುಮಕೂರ, ನಾಗರಾಜ ಆಟೋ ಇತರರಿದ್ದರು.
ನಾಟಕ ನೋಡಿ ಕಲಾವಿದರ ಪ್ರೋತ್ಸಾಹಿಸಿ
ಕವಿತಾಳ: ಆಧುನಿಕ ಯುಗದಲ್ಲಿ ನಾಟಕ ಕಲಾವಿದರ ಬಗ್ಗೆ ಗೌರವ ಕಡಿಮೆಯಾಗುತ್ತಿದೆ ಎಂದು ನಾಟಕ ಕಂಪನಿ ಮ್ಯಾನೇಜರ್ ಕೆ.ಶರಣಪ್ಪ ಕಲಂಗೇರ ಹೇಳಿದರು.
ಸಮೀಪದ ಆನಂದಗಲ್‌ನಲ್ಲಿ ಶ್ರೀ ಆಂಜನೇಯ ದೇವರ ಜಾತ್ರೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕೆ.ಎನ್.ಹನುಮಂತರಾಯ ಕಾಕರಗಲ್ ರಚಿಸಿದ ‘ಕರ್ತವ್ಯದ ಕಾಣಿಕೆ ಅರ್ಥಾತ್ ಸ್ವಾರ್ಥಿ ಸೋದರಮಾವ’ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಾವಿದರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ನಾಟಕ ಪ್ರದರ್ಶನ ಆಯೋಜಿಸಿದ್ದು, ಪ್ರೇಕ್ಷಕರು ನೋಡಿ ಬೆಂಬಲ ನೀಡಬೇಕೆಂದು ಕೋರಿದರು.
ಶ್ರದ್ಧಾನಂದ ಸ್ವಾಮೀಜಿ, ಆದಯ್ಯ ಸ್ವಾಮೀಜಿ, ಪ್ರಮುಖರಾದ ಶರಣಪ್ಪ ಮೆಡಿಕಲ್, ಲಿಂಗಪ್ಪ ಉಪನ್ಯಾಸಕ, ಪರಮಣ್ಣ ಪಂಚಾಯತ, ಡಾ.ಕುಮಾರಸ್ವಾಮಿ, ಅಮರೇಗೌಡ ದಳಪತಿ, ವೀರನಗೌಡ ಮಾ.ಪಾ, ಕಲಾವಿದರಾದ ಶರಣಬಸವ ಹೊನ್ನಳ್ಳಿ, ಯಂಕೋಬ ಗುರಿಕಾರ, ಹನುಮಂತ ಜೋಳದರಾಶಿ, ಬಸವರಾಜ ಕೊಟೆಕಲ್ ಇತರರಿದ್ದರು.