ಕೋಳಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿವಾನುಭವಗೋಷ್ಠಿಗೆ ಗಣ್ಯರು ಚಾಲನೆ ನೀಡಿದರು. ಡಾ. ಬಸವಲಿಂಗ ಮಹಾಂತ ಸ್ವಾಮೀಜಿ, ಶರಣರಾದ ಸಂಕನಾಳದ ದೇವಣ್ಣ ಹೊಸಮನಿ, ಬಸವರಾಜಪ್ಪ ಇಂಗಳದಾಳ, ಅಮರೇಶಪ್ಪ ಬಳ್ಳಾರಿ, ಮಾತೋಶ್ರೀ ಗಂಗಮ್ಮ ಕುರಕುಂದಿ ಇದ್ದರು. 
ಕೊಪ್ಪಳ

ಬಸವಣ್ಣನವರ ಹಾದಿಯಲ್ಲಿ ನಡೆಯಿರಿ

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ
  • ಆಂದೋಲನಕ್ಕೆ
  • ನಾಂದಿ
ಕುಷ್ಟಗಿ: ಪ್ರತಿಯೊಬ್ಬರೂ ಜ್ಞಾನದ ಕಡೆ ವಾಲಿದಾಗ ಜೀವನ ಸಾರ್ಥಕವಾಗಲಿದೆ ಎಂದು ಡಾ.ಶರಣಶ್ರೀ ಬಸವಲಿಂಗ ಮಹಾಂತ ಸ್ವಾಮೀಜಿ ಹೇಳಿದರು.
ಸಮೀಪದ ಕೋಳಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶರಣ ಮಲ್ಲಿನಾಥ ಸ್ಮರಣಾರ್ಥ ಹಮ್ಮಿಕೊಂಡಿದ್ದ 207ನೇ ಮಾಸಿಕ ಸಂಚಾರ ಶಿವಾನುಭವ ಗೋಷ್ಠಿ ಹಾಗೂ ಮುದಕಪ್ಪ ಇಂಗಳದಾಳ ಅವರ 19ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಭಾನುವಾರ ಮಾತನಾಡಿದರು.
ನಮ್ಮಲ್ಲಿರುವ ಅಜ್ಞಾನ ಅಂಧಕಾರ ತೊಲಗಬೇಕಾದರೆ, ಶರಣರು, ಸಂತರು, ಮಹಾತ್ಮರ ಸಂಘದೊಡಗೂಡಿ ಬದುಕಬೇಕು. ಹನ್ನೆರಡನೆಯ ಶತಮಾನದಲ್ಲಿ ಆಧ್ಯಾತ್ಮಿಕ ಪ್ರಜ್ಞೆಯಿಂದ ಕೂಡಿದ ಸಾಮಾಜಿಕ ಆಂದೋಲನಕ್ಕೆ ನಾಂದಿ ಹಾಡಿದ ಬಸವಣ್ಣನವರು ಇಂದಿಗೂ ಕೋಟ್ಯಂತರ ಜನರ ಹೃದಯ ಸಿಂಹಾಸನದಲ್ಲಿ ರಾರಾಜಿಸುತ್ತಿದ್ದಾರೆ. ಜನರು ಬಸವ ಪ್ರಜ್ಞಾವಂತರಾದರೆ ಈ ನಾಡು ಸರ್ವ ರೀತಿಯಿಂದಲೂ ಸುಂದರವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಶರಣ ದೇವಣ್ಣ ಹೊಸಮನಿ, ಮಾತೋಶ್ರೀ ಗಂಗಮ್ಮ ಕುರಕುಂದಿ, ನಿವೃತ್ತ ಉಪನ್ಯಾಸಕ ಟಿ.ಬಸವರಾಜ ತಾವರಗೇರಾ, ಕುಷ್ಟಗಿ ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಶರಣರಾದ ಬಸವರಾಜಪ್ಪ ಇಂಗಳದಾಳ, ದೊಡ್ಡಬಸಯ್ಯ ಹಂಪಣ್ಣ ತಾವರಗೇರಿ, ಬಸವರಾಜ ವರದಾಪುರ, ಸುಭಾಷ್ ಕೋರಿ, ರುದ್ರಪ್ಪ ವರದಾಪುರ, ಹನುಮಂತಪ್ಪ ಹುಣಶಿಹಾಳ, ಬಸವರಾಜ ಹೂಗಾರ ಪುರಾಣಿಕಮಠ, ಮಹಾದೇವಪ್ಪ ಚನ್ನಳ್ಳಿ, ಬಸವರಾಜ ತುರ್ವಿಹಾಳ, ಶರಣಪ್ಪ ಹಸಬಿ ಇತರರಿದ್ದರು.