Walk-in interview on May 5th 
ಕೊಪ್ಪಳ

ವಾಕ್​ ಇನ್​ ಇಂಟರ್​ವ್ಯೂವ್​ ಮೇ 5ಕ್ಕೆ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗಾಧಿಕಾರಿ ಮಾಹಿತಿ
ಕೊಪ್ಪಳ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್​ ಇನ್​ ಇಂಟರ್​ವ್ಯೂವನ್ನು ಮೇ 5 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರ ವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಈ ವಾಕ್​ ಇನ್​ ಇಂಟರ್​ವ್ಯೂವ್​ನಲ್ಲಿ ಧಾರವಾಡದ ಟಾಟಾ ಮೋಟಾರ್ಸ್​ ಸಂಸ್ಥೆಯು ತಮ್ಮಲ್ಲಿನ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ ನಡೆಸಲಿದ್ದಾರೆ. ?ಐ.ಟಿ.ಐ- ಆಲ್​ ಟ್ರೇಡ್​ ಅಥವಾ ಎಸ್​.ಎಸ್​.ಎಲ್​.ಸಿ, ಪಿ.ಯು.ಸಿ., ಡಿಪ್ಲೊಮಾ ಅಥವಾ ಇತರೆ ಪದವಿ ಅಭ್ಯರ್ಥಿಗಳು ಈ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತ 18 ರಿಂದ 25 ವರ್ಫಿದೊಳಗಿನ ನಿರುದ್ಯೋಗಿ ಪುರಫಿರು ದೃಢೀಕರಿಸಲಾದ ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳ 2 ಪ್ರತಿಗಳೊಂದಿಗೆ ಮತ್ತು ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ (ರೆಜುಮ್​) ಹಾಗೂ ಪಾಸ್​ ಪೋರ್ಟ್​ ಅಳತೆಯ 2 ಭಾವಚಿತ್ರಗಳೊಂದಿಗೆ ಈ ವಾಕ್​ ಇನ್​ ಇಂಟರ್​ವ್ಯೂವನಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.