ತಾಲೂಕಿನ ಹೊಸಕನಕಾಪುರ ಗ್ರಾಮದಲ್ಲಿ 150ಕ್ಕೂ ಹೆಚ್ಚು ಮುಕಂದ ಸುಮಿ ಸ್ಪೇಷಲ್​ ಸ್ಟೀಲ್​ ಲಿಮಿಟೆಡ್​ ಕಂಪನಿಯ ನೌಕರರು ಬ್ಯಾನರ್​ಗಳು ಹಾಗೂ ಜಾಗೃತಿ ಫಲಕಗಳೊಂದಿಗೆ ನಡೆದ ಎಸ್​ಐಆರ್​ ಜಾಗೃತಿ ಜಾಥಾ ಸಾರ್ವಜನಿಕರ ಗಮನ ಸೆಳೆಯಿತು. ತಾಪಂ ಪಂಚಾಯತ್​ ರಾಜ್​ ಸಹಾಯಕ ನಿರ್ದೇಶಕ ಮಹೇಶ್​, ಪಿಡಿಒ ಮಂಜುಳಾದೇವಿ ಹೂಗಾರ, ಕಂಪನಿಯ ಓಂ ಪ್ರವಲ್​ ಸಿಂಗ್​, ಮಂಜುನಾಥ್​ ಕುಲಕರ್ಣಿ ಇದ್ದರು. 
ಕೊಪ್ಪಳ

ಮತದಾರರು ಮಾಹಿತಿ ನೀಡ ಸಹಕರೀಸಿ

ಪ್ರಮುಖ ಮುಖ್ಯಾಂಶಗಳು

  • ಮಹೇಶ್​ ಮನವಿ
  • ಎಸ್​ಐಆರ್​ ಜಾಗೃತಿ ಜಾಥಾ
ಕೊಪ್ಪಳ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹಕರಿಸಿ, ಬೂತ್​ ಮಟ್ಟದ ಅಧಿಕಾರಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಬೇಕು ಎಂದು ತಾಪಂ ಪಂಚಾಯತ್​ ರಾಜ್​ ಸಹಾಯಕ ನಿರ್ದೇಶಕ ಮಹೇಶ್​ ಹೇಳಿದರು.
ತಾಲೂಕಿನ ಹೊಸಕನಕಾಪುರ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಎಸ್​ಐಆರ್​ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರನ್ನು ಸೇರ್ಪಡೆಗೊಳಿಸುವುದು, ಮರಣ ಹೊಂದಿರುವವರು, ಸ್ಥಳಾಂತರಗೊಂಡವರು, ನಕಲು ಹೆಸರುಗಳು ಹಾಗೂ ಇತರ ಅನರ್ಹ ಹೆಸರುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದು ಈ ವಿಶೇಷ ಸಮಗ್ರ ಪರಿಷ್ಕರಣೆ ಉದ್ದೇಶವಾಗಿದೆ. ಜೂನ್​ 30ರಿಂದ ಜುಲೈ 29ರವರೆಗೆ ಬಿಎಲ್​ಒಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದು, ಪ್ರತಿಯೊಬ್ಬ ಮತದಾರರು ಎಸ್​ಐಆರ್​ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಬಿಎಲ್​ಒಗಳು ಪ್ರತಿ ಮನೆಗೆ ಮೂರು ಬಾರಿ ಭೇಟಿ ನೀಡಲಿದ್ದು, ಹೊಸ ಮತದಾರರ ಸೇರ್ಪಡೆಗೂ ಇದು ಉತ್ತಮ ಅವಕಾಶವಾಗಿದೆ.
ಮುಕಂದ ಸುಮಿ ಸ್ಪೇಷಲ್​ ಸ್ಟೀಲ್​ ಲಿಮಿಟೆಡ್​ ಕಂಪನಿಯ ಆವರಣದಲ್ಲಿ ನಡೆದ ಕಾಲ್ನಡಿಗೆ ಜಾಗೃತಿ ಜಾಥಾದಲ್ಲಿ 150ಕ್ಕೂ ಹೆಚ್ಚು ನೌಕರರು ಪಾಲ್ಗೊಂಡರು. ಬ್ಯಾನರ್​ಗಳು ಹಾಗೂ ಜಾಗೃತಿ ಫಲಕಗಳೊಂದಿಗೆ ನಡೆದ ಜಾಥಾ ಸಾರ್ವಜನಿಕರ ಗಮನ ಸೆಳೆಯಿತು.
ಕಂಪನಿಯ ಘಟಕದ ಮುಖ್ಯಸ್ಥ ಓಂ ಪ್ರವಲ್​ ಸಿಂಗ್​, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಂಜುನಾಥ್​ ಕುಲಕರ್ಣಿ, ಅಧಿಕಾರಿಗಳಾದ ಮಾರುತಿ ವೈ., ರಾಜಕುಮಾರ್​ ಎಂ.ಜಿ., ಪಿಡಿಒ ಮಂಜುಳಾದೇವಿ ಹೂಗಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಂಪಂ ಕಾರ್ಯದರ್ಶಿ ಮಂಜುನಾಥ ಭಾವಿಕಟ್ಟಿ ಇತರರಿದ್ದರು.