ಕೊಪ್ಪಳ ತಾಲೂಕಿನ ಇರಕಲ್​ಗಡಾ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್​ಐಆರ್​ ಜಾಗೃತಿ ಜಾಥಾಕ್ಕೆ ತಾಪಂ ಎಡಿ ಮಹೇಶ ಎಚ್​.ಚಾಲನೆ ನೀಡಿದರು. ತಾಪಂ ಯೋಜನಾಧಿಕಾರಿ ರಾಜೇಸಾಬ ನದಾಫ್​, ಮುಖ್ಯ ಶಿಕ್ಷಕ ಹನಮಂತಪ್ಪ ಎಚ್​., ಪಿಡಿಒ ಸಿದ್ದಮ್ಮ ಮಠದ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಇದ್ದರು.  
ಕೊಪ್ಪಳ

ಮತದಾರರು ಎಸ್​ಐಆರ್​ಗೆ ಸಹಕರಿಸಿ

ಪ್ರಮುಖ ಮುಖ್ಯಾಂಶಗಳು

  • ಎಸ್​ಐಆರ್​ ಜಾಗೃತಿ ಜಾಥಾಕ್ಕೆ ಚಾಲನೆ
ಕೊಪ್ಪಳ : ಎಸ್​ಐಆರ್​ ಅಂಗವಾಗಿ ಸಾರ್ವಜನಿಕರು ಬಿಎಲ್​ಒಗಳಿಗೆ ಸಹಕರಿಸುವಂತೆ ತಾಪಂ ಸಹಾಯಕ ನಿರ್ದೇಶಕ ಮಹೇಶ ಎಚ್​. ಮನವಿ ಮಾಡಿದರು.
ತಾಲೂಕಿನ ಇರಕಲ್ಲಗಡಾ ಗಾಮದಲ್ಲಿ ಗುರುವಾ ಆಯೋಜಿಸಿದ್ದ ಎಸ್​ಐಆರ್​ ಕುರಿತ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸುವುದು, ಮರಣ ಹೊಂದಿದವರು, ನಕಲಿ ಮತದಾರರು, ಸ್ಥಳಾಂತರಗೊಂಡವರನ್ನು ಕೈ ಬಿಡುವುದು ಪರಷ್ಕರಣೆ ಉದ್ದೇಶ. ಜು.29ವರೆಗೆ ಬೂತ್​ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಮತದಾರರ ವಿವರ ಪರಿಶೀಲಿಸುವರು. ಅರ್ಜಿ ಭರ್ತಿ ಮಾಡಿ ಸಲ್ಲಿಸಿ. ಬಿಎಲ್​ಒ ಪ್ರತಿ ಮನೆಗೆ ಮೂರು ಬಾರಿ ಭೇಟಿ ನೀಡಲಿದ್ದು, ಅಗತ್ಯ ಮಾಹಿತಿ ನೀಡಿ ಸಹಕರಿಸಿ ಎಂದು ತಿಳಿಸಿದರು.
ಗ್ರಾಮದ ಸರ್ಕಾರಿ ಪಿಯು ಕಾಲೇಜಿನಿಂದ ಆರಂಭವಾದ ಜಾಗೃತಿ ಜಾಥಾ ಅರಳಿಕಟ್ಟೆ ಮಾರ್ಗವಾಗಿ ಮತ್ತೆ ಕಾಲೇಜು ಆವರಣದಲ್ಲಿ ಮುಕ್ತಾಯಗೊಂಡಿತು. 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದರು.
ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್​, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಹನಮಂತಪ್ಪ ಎಚ್​, ಪಿಡಿಒ ಸಿದ್ದಮ್ಮ ಮಠದ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಪಂ ಕಾರ್ಯದರ್ಶಿ ಪೂರ್ಣೇಂದ್ರಯ್ಯ ಭೂಸನೂರಮಠ, ಉಪನ್ಯಾಸಕರಾದ ಶ್ರೀನಿವಾಸಗೌಡ, ವೆಂಕಟರಡ್ಡಿ, ದ್ಯಾಮಣ್ಣ, ಕರವಸೂಲಿಗಾರ ಕೊಟ್ರೇಶ್​, ಗ್ರಾಂಪಂ ಡಿಇಒ ಮೌನೇಶ ಇತರರಿದ್ದರು.