- ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ
ಕೊಪ್ಪಳ: ಹಿಂದೆ ನಾನು ವಿಪಕ್ಷ ನಾಯಕ ಆರ್.ಅಶೋಕ್, ಸಚಿವ ಲಕ್ಷ$್ಮಣ ಸವದಿ ವೈಷ್ಣವಿ ದೇವಿ ದೇಗುಲಕ್ಕೆ ಹೋಗಿದ್ದೆವು. ಅವತ್ತೇ ದೆಹಲಿಯಿಂದ ಅಶೋಕ್ ಅವರಿಗೆ ವಿಪಕ್ಷ ನಾಯಕ ಆಗುವ ಬಗ್ಗೆ ಸುದ್ದಿ ಬಂದಿತ್ತು. ನಾನು ಪಕ್ಕದಲ್ಲೇ ಇದ್ದೆ. ಅಂದೇ ಶುಭಾಶಯ ತಿಳಿಸಿರುವೆ ಎಂದು ರಾಯರಡ್ಡಿ ವೈಷ್ಣವಿ ದೇವಿ ೋಟೋ ತೋರಿಸಿದರು.
ಬುಧವಾರ ಯಲಬುರ್ಗಾ, ಕುಕನೂರಿನಲ್ಲಿ ಪ್ರವಾಸ ಕೈಗೊಂಡು ಮಾತನಾಡಿದರು.
ಆರ್.ಅಶೋಕ್, ಸುನಿಲ್ಕುಮಾರ್, ಹಾಲಪ್ಪ ಆಚಾರ್ ಯಾರೂ ನನ್ನನ್ನು ಬೈಯ್ಯುವುದಿಲ್ಲ. ಯಾಕೆಂದರೆ ಶಕ್ತೀಪಿಠದಲ್ಲಿ ನಾನು ಅಶೋಕ್ಗೆ ಗುಡ್ ನ್ಯೂಸ್ ನೀಡಿರುವೆ. ನಾನು ಎಲ್ಲ ಧರ್ಮಗಳ ಪವಿತ್ರ ಸ್ಥಳಗಳಿಗೆ ಹೋಗಿ ಬಂದಿರುವೆ. ನಾನು ಮುಸ್ಲಿಂ ಧಾರ್ಮಿಕ ವಿವಾಹ ಕಾರ್ಯಕ್ರಮದಲ್ಲಿ ಹೇಳಿದ್ದು ಇಸ್ಲಾಂ ಧರ್ಮ ಶ್ರೇಷ್ಠವೆಂದು. ಉಪನಿಷತ್ತು, ವೇದ ಅಧ್ಯಯನ ಮಾಡಿರುವೆ. ಮುಸ್ಲಿಂ ಸಮುದಾಯ ಸಭೆಯಲ್ಲಿ ಕುರಾನ್ನಲ್ಲಿ ಇರುವುದನ್ನು ಹೇಳುವುದು ಬಿಟ್ಟು ಅವರನ್ನು ಬೈಯ್ಯಲು ಆಗುತ್ತದಾ ? ಮತಾಂತರ ಆಗದ ಹೊರತು ಹಜ್ಗೆ ಹೋಗಲು ಆಗದು, ನಾನು ಶರಣ ತತ್ವದವನು, ಮತಾಂತರ ಆಗುವುದಿಲ್ಲ. ಎಲ್ಲ ಧರ್ಮಗಳ ಸಾರ ಒಂದೇ ಎಂದಿರುವೆ ಎಂದು ಹಿಂದಿನ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು.
ಎರಡು ದಿನ ನನ್ನನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದರು. ಬಿಹಾರದ ಸಂಸದ ದ್ಯಾನಿಶ್ ಅಲಿ ಸಹ ೋನ್ ಮಾಡಿ ವಿಚಾರಿಸಿದರು. ಸಿಎಂ ಡಿಕೆಶಿ ಕೂಡಾ ಕೇಳಿದರು. ಜನಗಳೇ ನಿಜ ದೇವರು. ನನಗೆ ಪ್ರಚಾರ ನೀಡಿದ್ದಕ್ಕೆ ಧನ್ಯವಾದಗಳು ಎಂದು ಮಾಧ್ಯಮಗಳಿಗೆ ಟಾಂಗ್ ನೀಡಿದರು.