ಗಂಗಾವತಿ ತಾಲೂಕಿನ ಪಂಪಾಸರೋವರದ ಶ್ರೀಮದ್ ಜಗದ್ಗುರು ಆನೆಗೊಂದಿ ಮಹಾಸಂಸ್ಥಾನ ಪಂಚ ಸಿಂಹಾಸನ ಸರಸ್ವತಿ ಪೀಠದಲ್ಲಿ ಆರಂಭಿಸಿರುವ ಶ್ರೀ ವಿಶ್ವಕರ್ಮ ಸಂಸ್ಕೃತ ಗುರುಕುಲವನ್ನು ವಿಶ್ವಕರ್ಮ ಸಮಾಜದ ಪೀಠಾಧಿಪತಿ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಗುರುವಾರ ಉದ್ಘಾಟಿಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಪ್ರಮುಖರಾದ ದಿನೇಶ ಆಚಾರ್ಯ ಪಡುಬಿದ್ರಿ, ವಿ. ಶ್ರೀಧರಾಚಾರ್ಯ ಇತರರಿದ್ದರು.
- ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ
ಗಂಗಾವತಿ: ತಾಲೂಕಿನ ಆನೆಗೊಂದಿ ಬಳಿಯ ಪಂಪಾಸರೋವರದ ಶ್ರೀಮದ್ ಜಗದ್ಗುರು ಆನೆಗೊಂದಿ ಮಹಾಸಂಸ್ಥಾನ ಪಂಚ ಸಿಂಹಾಸನ ಸರಸ್ವತಿ ಪೀಠದಲ್ಲಿ ಆರಂಭಿಸಿರುವ ಶ್ರೀ ವಿಶ್ವಕರ್ಮ ಸಂಸ್ಕೃತ ಗುರುಕುಲಕ್ಕೆ ಗುರುವಾರ ಚಾಲನೆ ದೊರೆಯಿತು.
ಸಾನ್ನಿಧ್ಯವಹಿಸಿದ್ದ ವಿಶ್ವಕರ್ಮ ಸಮಾಜದ ಪೀಠಾಧಿಪತಿ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಂಸ್ಕೃತಿ ಮತ್ತು ಸಂಸ್ಕಾರ ಮುಂದಸುವರಿಸಿಕೊಂಡು ಹೋಗುವ ಜವಾಬ್ದಾರಿ ಸಮಾಜದ ಮೇಲಿದೆ. ಸನಾತನ ಧರ್ಮ ಉಳಿವಿಗಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಶಿಲ್ಪಕಲೆ, ವಾಸ್ತು ವೈಭವನ್ನು ಜಗತ್ತಿಗೆ ನೀಡಿರುವ ವಿಶ್ವಕರ್ಮ ಸಮಾಜದ ಕೊಡುಗೆ ಸಾಕಷ್ಟಿದ್ದು, ಸನಾತನ ಸಂಸ್ಕೃತಿ ಉಳಿಯಬೇಕಾದರೆ ಗುರುಕುಲ ಮಾದರಿ ವಿದ್ಯಾಪೀಠಗಳು ಹೆಚ್ಚಾಗಬೇಕಿದೆ ಎಂದರು.
ರಾಜವಂಶಸ್ಥೆ ಲಲಿತಾರಾಣಿ ರಾಯಲು, ಪ್ರಮುಖರಾದ ದಿನೇಶ ಆಚಾರ್ಯ ಪಡುಬಿದ್ರಿ, ವಿ. ಶ್ರೀಧರಾಚಾರ್ಯ, ಪೃಥ್ವಿರಾಜ ಆಚಾರ್ಯ, ನಾಗಲಿಂಗಪ್ಪ ಪತ್ತಾರ್ ಇತರರಿದ್ದರು.