ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಪರಶುರಾಮ ಸಾಲ್ಮನಿ, ಗಿರಿಯಪ್ಪ ಹಾರನಹಳ್ಳಿ, ಅನಿತಾ, ಶರಣಪ್ಪ, ನಾಗರತ್ನ, ಯಶೋದಾ ಇತರರಿದ್ದರು. 
ಕೊಪ್ಪಳ

ಮಹಿಳೆಯರ ಮೇಲೆ ದೌರ್ಜನ್ಯ ಆತಂಕಕಾರಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಅಕ್ಕ ಪಡೆಯ ಪೊಲೀಸ್ ಪೇದೆ ಅನಿತಾ ಕಳವಳ
  • ಅಳವಂಡಿ ಬೆಟಗೇರಿ ಶಾಲೆಯಲ್ಲಿ ಕಾನೂನು ಅರಿವು
ಅಳವಂಡಿ: ಇತ್ತೀಚಿನ ದಿನಗಳಲ್ಲಿ ಬಾಲ್ಯವಿವಾಹ, ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಕ್ಕ ಪಡೆಯ ಪೊಲೀಸ್ ಪೇದೆ ಅನಿತಾ ಕಳವಳ ವ್ಯಕ್ತಪಡಿಸಿದರು.
ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಕ್ಕ ಪಡೆಯಿಂದ ಹಮ್ಮಿಕೊಂಡಿದ್ದ ‘ಹೆಣ್ಣುಮಕ್ಕಳ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ನಾವಿದ್ದೀವಿ ನಿಮ್ಮ ಜತೆ’ ಎಂಬ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿನಿಯರು ಶಿಕ್ಷಣದ ಕಡೆ ಹೆಚ್ಚಿನ ಗಮನಹರಿಸಿ ಗುರಿ, ಸಾಧನೆಯತ್ತ ಮುನ್ನಡೆಯಬೇಕು. ಯಾವುದೇ ರೀತಿಯ ಕಿರುಕುಳ, ದೌರ್ಜನ್ಯ ಅಥವಾ ತೊಂದರೆ ಎದುರಾದರೆ ಕೂಡಲೇ 181 ಮಹಿಳಾ ಸಹಾಯವಾಣಿ ಅಥವಾ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು. ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಅಗತ್ಯ ನೆರವು ಒದಗಿಸಲಾಗುವುದು ಎಂದರು.
ಮುಖ್ಯಪೇದೆ ಶರಣಪ್ಪ ಮಾತನಾಡಿ, ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ಮಾಧ್ಯಮಗಳ ದುರ್ಬಳಕೆಯಿಂದ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಘಟನೆಗಳು ಕಂಡುಬಂದರೆ ತಕ್ಷಣ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಬೇಕು ಎಂದರು.
ಮುಖ್ಯಶಿಕ್ಷಕ ಪರಶುರಾಮ ಸಾಲ್ಮನಿ ಮಾತನಾಡಿದರು. ಶಿಕ್ಷಕ ಗಿರಿಯಪ್ಪ ಹಾರನಹಳ್ಳಿ, ಅಕ್ಕ ಪಡೆಯ ಪೇದೆಗಳಾದ ನಾಗರತ್ನ, ಯಶೋದಾ, ಶಿಕ್ಷಕರಾದ ರವಿಕಿರಣ ಟಿಕಾರೆ, ಮರ್ದಾನಲಿ ಗಡಾದ, ರಾಜಾಸಾಬ ಬಳಿಗೇರ, ಪ್ರಕಾಶರೆಡ್ಡಿ, ಗೋವಿಂದರೆಡ್ಡಿ, ವೀರಯ್ಯ ಪೂಜಾರ, ಶಾಂತವೀರಯ್ಯ ಕಳ್ಳಿಮಠ, ಸುನೀತಾ ಯಾಳಗಿ, ಸೋಮಣ್ಣ ತಳಕಲ್, ರಾಧಿಕಾ ಇತರರಿದ್ದರು.