ಗಂಗಾವತಿ ತಾಲೂಕಾಡಳಿತ ಸೌಧದಲ್ಲಿ ಮಹಾಯೋಗಿ ಶ್ರೀ ವೇಮನ ಜಯಂತಿ ಪೂರ್ವಸಭಾವಿ ಸಭೆಯಲ್ಲಿ ತಹಸೀಲ್ದಾರ್ ಯು.ನಾಗರಾಜ್ ಸೋಮವಾರ ಮಾತನಾಡಿದರು. ರೆಡ್ಡಿ ಸಮಾಜದ ತಾಲೂಕಾಧ್ಯಕ್ಷ ಆರ್.ಪಿ.ರೆಡ್ಡಿ, ಮುಜರಾಯಿ ಇಲಾಖೆ ನಾಮನಿರ್ದೇಶಕ ವಿಶ್ವನಾಥ ಮಾ.ಪಾಟೀಲ್, ಸಮಾಜದ ಮುಖಂಡರಾದ ಮನೋಹರಗೌಡ ಹೇರೂರು, ರಾಜೇಶ ಅಂಗಡಿ, ವಿಜಯಕುಮಾರ ಗದ್ದಿ ಇತರರಿದ್ದರು. 
ಕೊಪ್ಪಳ

ವೇಮನ ಸಂದೇಶ ಸಾರ್ವಕಾಲಿಕ

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ಮಹಾಯೋಗಿ ಶ್ರೀ ವೇಮನ ಜಯಂತಿ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕಿದ್ದು, ಸಮಾಜದ ಮುಖಂಡರು ನೀಡುವ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಗುವುದು ಎಂದು ತಹಸೀಲ್ದಾರ್ ಯು.ನಾಗರಾಜ ಹೇಳಿದರು.
ನಗರದ ತಾಲೂಕಾಡಳಿತ ಸೌಧದ ಕಚೇರಿಯಲ್ಲಿ ಶ್ರೀ ವೇಮನ ಜಯಂತಿ ಪೂರ್ವಭಾವಿ ಸಭೆಯಲ್ಲಿ ಸೋಮವಾರ ಮಾತನಾಡಿದರು. ಸರ್ಕಾರದ ಅಧಿಸೂಚನೆಯಂತೆ ಜ.19ರಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಮಾಜದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ವೇಮನರ ತತ್ವ, ಸಂದೇಶಗಳನ್ನು ಪಸರಿಸುವ ಕೆಲಸವಾಗಬೇಕಿದೆ ಎಂದರು.
ರಡ್ಡಿ ಸಮಾಜದ ತಾಲೂಕಾಧ್ಯಕ್ಷ ಆರ್.ಪಿ. ರೆಡ್ಡಿ ಮಾತನಾಡಿ, ವೇಮನ ಸಂದೇಶಗಳು ಎಲ್ಲ ಕಾಲಕ್ಕೂ ಮಾನ್ಯತೆ ಪಡೆದಿದ್ದು, ಅದ್ದೂರಿ ಮತ್ತು ಅರ್ಥಪೂರ್ಣ ಆಚರಣೆಗೆ ತಾಲೂಕಾಡಳಿತ ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಮುಜರಾಯಿ ಇಲಾಖೆ ನಾಮನಿರ್ದೇಶಕ ವಿಶ್ವನಾಥ ಮಾ.ಪಾಟೀಲ್, ಸಮಾಜದ ಮುಖಂಡರಾದ ಮನೋಹರಗೌಡ ಹೇರೂರು, ಸುರೇಶ ಸಿಂಗನಾಳ್, ರಾಜೇಶ ಅಂಗಡಿ, ವಿರೂಪಾಕ್ಷರೆಡ್ಡಿ, ವಿಜಯಕುಮಾರ ಗದ್ದಿ, ಲಿಂಗನಗೌಡ ಹೇರೂರು, ಚನ್ನಬಸವ ಹೇರೂರು, ಬಸಂತ್ ಪಾಟೀಲ್, ಭೀಮೇಶ್ ಮಾಲಿ ಪಾಟೀಲ್, ರಮೇಶ ಖ್ಯಾಡದ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.