ಕೊಪ್ಪಳದ ಗಂಗಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ವಿಭಾಗದ ನಿರ್ದೇಶಕ ಚಂದ್ರಶೇಖರ್​ ಜೆ. ವಾತ್ಸಲ್ಯ ಕಿಟ್​ ವಿತರಿಸಿದರು. ಜಿಲ್ಲಾ ನಿರ್ದೇಶಕ ಪ್ರಕಾಶ್​ ರಾವ್​, ಯೋಜನಾಧಿಕಾರಿ ಜಗದೀಶ್​ ಕೆ. ಎಚ್​., ಜ್ಞಾನವಿಕಾಸ ಸಮನ್ವಯಧಿಕಾರಿ ಗೀತಾ, ಇದ್ದರು. 
ಕೊಪ್ಪಳ

ಗಂಗಮ್ಮನಿಗೆ ವಾತ್ಸಲ್ಯ ಕಿಟ್​

ಪ್ರಮುಖ ಮುಖ್ಯಾಂಶಗಳು

  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಕೊಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಾತೃಶ್ರೀ ಅಮ್ಮನವರು ಅಸಹಾಯಕ ಕುಟುಂಬಗಳನ್ನು ಗುರುತಿಸಿ ನೀಡುತ್ತಿರುವ ಸೌಲಭ್ಯದವಾದ ವಾತ್ಸಲ್ಯ ಕಿಟ್​ ಅನ್ನು ತಾಲೂಕಿನ ಫಲಾನುಭವಿ ಗಂಗಮ್ಮ ಅವರಿಗೆ ವಿತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ನಿರ್ದೇಶಕ ಚಂದ್ರಶೇಖರ್​ ಜೆ. ಅವರು ಕಿಟ್​ ವಿತರಿಸಿ ಗಂಗಮ್ಮಳ ಯೋಗ ಕ್ಷೇಮ ವಿಚಾರಿಸಿ ಕಿಟ್​ ಅನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ನಿರ್ದೇಶಕ ಪ್ರಕಾಶ್​ ರಾವ್​, ಕೊಪ್ಪಳ ಪಶ್ಚಿಮ ತಾಲೂಕಿನ ಯೋಜನಾಧಿಕಾರಿ ಜಗದೀಶ್​ ಕೆ. ಎಚ್​., ಜ್ಞಾನವಿಕಾಸ ಸಮನ್ವಯಧಿಕಾರಿ ಗೀತಾ, ವಲಯದ ಮೇಲ್ವಿಚಾರಕ ಮಲ್ಲಿಕಾರ್ಜುನ ಸೇವಾಪ್ರತಿನಿಧಿ ಪೂರ್ಣಿಮಾ ಇದ್ದರು.