ಕನಕಗಿರಿಯಲ್ಲಿ ವಾಸವಿ ಜಯಂತಿ ನಿಮಿತ್ತ ಮಹಿಳೆಯರಿಂದ ಕಳಸ-ಕುಂಭ ಮೆರವಣಿಗೆ ನಡೆಯಿತು. 
ಕೊಪ್ಪಳ

ಕುಂಭ-ಕಳಸದೊಂದಿಗೆ ವಾಸವಿ ದೇವಿ ಮೆರವಣಿಗೆ

ಕುರುವತ್ತಿ ಶ್ರೀಕಾಂತಪ್ಪ
ಕನಕಗಿರಿ: ಪಟ್ಟಣದಲ್ಲಿ ಆರ್ಯವೈಶ್ಯ ಸಮಾಜದಿಂದ ಪಾರ್ವತಿ ಪ್ರತಿರೂಪವಾದ ವಾಸವಿ ಜಯಂತಿ ಭಾನುವಾರ ಆಚರಿಸಲಾಯಿತು.
ಸಮಾಜದ ಅಧ್ಯಕ್ಷ ಪಾಂಡುರಂಗ ಜನಾದ್ರಿ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ವಾಸವಿ ಅಮ್ಮನವರ ಜಯಂತಿಯನ್ನು ಅಚ್ಚುಕಟ್ಟಾಗಿ ಆಚರಿಸಲಾಗಿದೆ. ಗಜಲಕ್ಷ್ಮೀ ದೇವಸ್ಥಾನದಿಂದ ರಾಜಬೀದಿ ಮೂಲಕ ನಗರೇಶ್ವರ ದೇಗುಲದವರೆಗೆ ಕಳಸ, ಕುಂಭ ಮೆರವಣಿಗೆ ಮಾಡಲಾಗಿದೆ ಎಂದರು.
ಸಂಜೆ ಮಹಿಳೆಯರಿಂದ ಸಾಮೂಹಿಕ ಭಜನೆ, ಲಕ್ಷ್ಮೀ ಸ್ತೋತ್ರ ಪಾರಾಯಣ, ತೀರ್ಥ ಪ್ರಸಾದ, ಅಮ್ಮನವರಿಗೆ ವಿಶೇಷ ಪೂಜೆ, ಅಲಂಕಾರ ಸೇರಿದಂತೆ ನಾನಾ ಕಾರ್ಯಕ್ರಮಗಳು ನೆರವೇರಿದವು.
ಉಪಾಧ್ಯಕ್ಷ ಸತ್ಯನಾರಾಯಣ ಶ್ರೇಷ್ಠಿ ಖ್ಯಾಡೇದ್, ಪ್ರಧಾನ ಕಾರ್ಯದರ್ಶಿ ಹನುಮೇಶ ಜನಾದ್ರಿ, ಪ್ರಮುಖರಾದ ರಮೇಶ ಶ್ರೇಷ್ಠಿ ಸಿರವಾರ, ಹನುಮೇಶ ಯಲಬುರ್ಗಿ, ಹನುಮೇಶ ಬೊಕ್ಕಸದ, ಮಹಾಬಳೇಶ ಶ್ರೇಷ್ಠಿ, ರಮೇಶ ಚಿಕ್ಕಮಾದಿನಾಳ, ಮಂಜುನಾಥ ಬೊಕ್ಕಸದ, ವೆಂಕಟೇಶ ಸೌದ್ರಿ, ಸಾಗರ ಜನಾದ್ರಿ, ಸತೀಶ ಅಂಜಿನಳ್ಳಿ, ಗುರುರಾಜ ಖ್ಯಾಡೇದ, ನವೀನ ಬೊಕ್ಕಸದ, ನಾರಾಯಣ ಕಂದಗಲ್, ಮಹೇಶ ಬ್ಯಾಡಗಿ ಹಾಗೂ ಆರ್ಯವೈಶ್ಯ ಸಮಾಜದ ಮಹಿಳೆಯರಿದ್ದರು.
ಸಿರವಾರ: ತಾಲೂಕಿನ ಹಿರೇಖೆಡಾ ಗ್ರಾಪಂ ವ್ಯಾಪ್ತಿಯ ಸಿರವಾದಲ್ಲಿ ಡೊಳ್ಳು ವಾದ್ಯ, ಕಳಸ ಕುಂಭದೊಂದಿಗೆ ವಾಸವಿ ದೇವಿ ಭಾವಚಿತ್ರ ಫೋಟೋ ಮೆರವಣಿಗೆ ನಡೆಸಲಾಯಿತು. ಮಕ್ಕಳು ಮತ್ತು ಮಹಿಳೆಯರಿಗೆ ಆಟಗಳನ್ನು ಆಡಿಸಲಾಯಿತು. ಅಮ್ಮನವರ ತೊಟ್ಟಿಲು ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ಈರಣ್ಣ, ಉಪಾಧ್ಯಕ್ಷ ಶೇಷಯ್ಯ ನವಲಿ, ಹಂಗಾಮಿ ಅಧ್ಯಕ್ಷ ವಿರುಪಣ್ಣ ಜನಾದ್ರಿ, ಕಾರ್ಯದರ್ಶಿ ಮಲ್ಲಯ್ಯ, ಹಿರಿಯರಾದ ತಿಮ್ಮಯ್ಯ ನಾರಾಯಣ ಇಂಗಳದಾಳ್, ನಾರಾಯಣ, ಶಿವರಾಜ್, ಗುರುರಾಜ್ ಪಿ, ರಮೇಶ್, ವೀರೇಶ್, ಮಲ್ಲೇಶ್ ಇತರರಿದ್ದರು.