ಕುಷ್ಟಗಿ ತಹಸಿಲ್ ಕಚೇರಿಯಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ರಜನಿಕಾಂತ್ ಕೆಂಗೇರಿ, ಶಿರಸ್ತೇದಾರ್ ಅನಂತಕುಮಾರ ಮುಜಾಮದಾರ್, ಕಂದಾಯ ನಿರೀಕ್ಷಕ ಅಬ್ದುಲ್ ರಜಾಕ್ ಇತರರಿದ್ದರು.
ಮೌಲ್ಯಗಳು ಮನುಕುಲಕ್ಕೆ ಆಧಾರ
ಕುಷ್ಟಗಿ: ಹದಿನಾಲ್ಕನೇ ಶತಮಾನದ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಕ್ತಿಯಲ್ಲಿ ನಾಡಿಗೆ ಹೆಸರಾದವರು ಎಂದು ಗ್ರೇಡ್-2 ತಹಸೀಲ್ದಾರ್ ರಜನಿಕಾಂತ್ ಕೆಂಗೇರಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿವಶರಣೆ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನನ್ನು ಆರಾಧಿಸುತ್ತಾ ಸಂಸಾರದಲ್ಲಿ ಸಾಗಿ ಸದ್ಗತಿ ಹೊಂದಿದ್ದಾರೆ. ಮಲ್ಲಮ್ಮನ ಜೀವನ ಮೌಲ್ಯಗಳು ಮನುಕುಲಕ್ಕೆ ಆಧಾರವಾಗಿವೆ ಎಂದರು.
ಶಿರಸ್ತೇದಾರ್ ಅನಂತಕುಮಾರ ಮುಜಾಮದಾರ್, ಕಂದಾಯ ನಿರೀಕ್ಷಕ ಅಬ್ದುಲ್ ರಜಾಕ್, ಸಿಬ್ಬಂದಿ ಸುಂದರರಾಜ್, ಚಂದ್ರು ಪೂಜಾರ್ ಇತರರಿದ್ದರು.