ಕೊಪ್ಪಳದ ಸಾಹಿತ್ಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಡಿವಾಳ ವಾಚಿದೇವ ಜಯಂತಿ ಕಾರ್ಯಕ್ರಮವನ್ನು ಚಿತ್ರದುರ್ಗ ಮಠದ ಶ್ರೀ ಬಸವ ವಾಚಿದೇವ ಸ್ವಾಮೀಜಿ ಉದ್ಘಾಟಿಸಿದರು. ಜೀವನ ಕೌಶಲ ತರಬೇತುದಾರ ಜೆ.ಸಿ. ರಾಜಶೇಖರ ಬಳ್ಳಾರಿ, ರಾಜ್ಯಾಧ್ಯಕ್ಷ ಎಂ.ಕೆ. ಹನುಮಂತ, ಉಪಾಧ್ಯಕ್ಷ ಪಕ್ಕೀರಪ್ಪ ಮಡಿವಾಳರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಯಕ ನಿರ್ದೇಶಕ ಕರ್ಣಕುವಾರ ಇತರರಿದ್ದರು.
- ಶ್ರೀ ಬಸವ ವಾಚಿದೇವ ಸ್ವಾಮೀಜಿ ಅನಿಸಿಕೆ
- ಮಡಿವಾಳ ವಾಚಿದೇವ ಜಯಂತಿ ಆಚರಣೆ
ಕೊಪ್ಪಳ: ಶಿಕ್ಷಣ ಮತ್ತು ಒಗ್ಗಟ್ಟಿನಿಂದ ವಾತ್ರ ಸಮುದಾಯದ ಏಳಿಗೆ ಸಾಧ್ಯ. 12ನೇ ಶತವಾನದ ಕ್ರಾಂತಿಕಾರಿ ಶರಣ ಮಡಿವಾಳ ವಾಚಿದೇವರ ವಚನಗಳು ಜಗತ್ತಿಗೆ ಜ್ಞಾನದ ದಾರಿಯಾಗಿವೆ. ನಮ್ಮ ಸಮುದಾಯದ ಏಳಿಗೆಯಾಗಬೇಕಾದರೆ ಆಧ್ಯಾತ್ಮಿಕ ಶಕ್ತಿಯೊಂದಿಗೆ ಶೈಕ್ಷಣಿಕ ಮತ್ತು ನೈತಿಕ ಶಕ್ತಿಯನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಚಿತ್ರದುರ್ಗದ ಡಾ. ಬಸವ ವಾಚಿದೇವ ಸ್ವಾಮೀಜಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಡಿವಾಳ ವಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ವಾತನಾಡಿದರು.
ಮಡಿವಾಳ ವಾಚಿದೇವ ಸವಾಜದ ಸೂತಕವನ್ನು ಕಳೆದ ಮಹಾನ್ ಚೇತನ. ಅವರು ನೀಡಿದ 3 ಕೋಟಿ 300 ವಚನಗಳು ನಮಗೆ ಸ್ಫೂರ್ತಿ. ಇಂದು ಮೀಸಲಾತಿ ಎಂಬುದು ಗಗನಕುಸುಮವಾಗಿದೆ. ನಮ್ಮ ಪೂರ್ವಜರು ಅನುಭವಿಸಿದ ಕಷ್ಟಗಳು ಮುಂದಿನ ಪೀಳಿಗೆಗೆ ಬರಬಾರದು ಎಂದರೆ ಶಿಕ್ಷಣದ ಜತೆಗೆ ಹೋರಾಟವೂ ಮುಖ್ಯ. ಹೀಗಾಗಿ ವಾ.16ರಂದು ವಿಧಾನಸೌಧದ ಮುಂದೆ ನಡೆಯಲಿರುವ ಪ್ರತಿಭಟನೆಯಲ್ಲಿ ಸವಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶ್ರೀಗಳು ವಾರ್ಗದರ್ಶನ ನೀಡಿದರು.
ಜೀವನ ಕೌಶಲ ತರಬೇತುದಾರ ಜೆ.ಸಿ. ರಾಜಶೇಖರ ಬಳ್ಳಾರಿ ವಾತನಾಡಿ, ನಮ್ಮ ಸಮುದಾಯ ಸಂಖ್ಯೆಯಲ್ಲಿ ಕಡಿಮೆಯಿರಬಹುದು, ಆದರೆ ಒಗ್ಗಟ್ಟಿನಲ್ಲಿ ಬಲಿಷ್ಠವಾಗಬೇಕು. ಯಾವುದೇ ಸ್ವಾರ್ಥವಿಲ್ಲದ ನಮ್ಮವರು ಎನ್ನುವ ಭಾವನೆಯುಳ್ಳ ನವಯುವಕರ ತಂಡದಿಂದ ವಾತ್ರ ಸಮುದಾಯದ ಬದಲಾವಣೆ ಸಾಧ್ಯ. ಬಸವಣ್ಣನವರ ಬೆನ್ನಿಗೆ ಆಧಾರವಾಗಿ ನಿಂತವರು ವಾಚಿದೇವರು. ಅಂತಹ ಪರಂಪರೆಯ ನಮಗೆ ಶಿಕ್ಷಣವೇ ಅತಿ ದೊಡ್ಡ ಆಯುಧ ಎಂದರು.
ಉತ್ತರ ಕರ್ನಾಟಕ ಮಡಿವಾಳ ವಾಚಿದೇವ ಸಂದ ಉಪಾಧ್ಯಕ್ಷ ಪಕ್ಕೀರಪ್ಪ ಮಡಿವಾಳರ, ಪ್ರಧಾನ ಕಾರ್ಯದರ್ಶಿ ರಾಮಣ್ಣ ಮಡಿವಾಳರ, ವಕ್ತಾರ ಬಸವರಾಜ ಬೆಳಗಲಿ, ನಗರಸಭೆ ವಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ಮಡಿವಾಳ ಸಂದ ಜಿಲ್ಲಾಧ್ಯಕ್ಷ ಕೃಷ್ಣ ಮಡಿವಾಳರ, ಗೌರವಾಧ್ಯಕ್ಷ ದುರುಗೇಶಜಿ. ಮಡಿವಾಳರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುವಾರ ಇತರರಿದ್ದರು.
ಈಗಾಗಲೇ ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಡಿವಾಳ ಸಮುದಾಯ ಎಸ್ಸಿ ಪಟ್ಟಿಯಲ್ಲಿದೆ. ರಾಜ್ಯದಲ್ಲಿಯೂ ಅನ್ನಪೂರ್ಣಮ್ಮ ಆಯೋಗದ ವರದಿ ಸಲ್ಲಿಕೆಯಾಗಿದ್ದರೂ ಸರ್ಕಾರ ನಮಗೆ ನ್ಯಾಯ ಒದಗಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಹಕ್ಕೊತ್ತಾಯ ಮಂಡಿಸಲು ವಾರ್ಚ್ 16ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟಕ್ಕೆ ಬೆಂಬಲ ಕೋರಿದರು.