ಗಂಗಾವತಿಯಲ್ಲಿ ಬಸವ ಜಯಂತಿ ಆಚರಣೆ ಸಮಿತಿ ಹಮ್ಮಿಕೊಂಡಿದ್ದ ಶರಣರ ಜೀವನ ದರ್ಶನ ಪ್ರವಚನ ಸಮಾರೋಪದಲ್ಲಿ ಡಾ. ಮಹಾಂತ ಬಸವಲಿಂಗ ಸ್ವಾಮೀಜಿ ಮಾತನಾಡಿದರು. ದೇವಾಲಯ ಸಮಿತಿ ಸದಸ್ಯ ಹೊಸಳ್ಳಿ ಶಂಕರಗೌಡ, ಬಸವ ಜಯಂತಿ ಆಚರಣೆ ಸಮಿತಿ ಗೌರವಾಧ್ಯಕ್ಷ ಎ್.ಷಣ್ಮುಖಪ್ಪ, ಕಾರ್ಯಾಧ್ಯಕ್ಷ ಅರಳಿ ಶೇಖರಪ್ಪ, ಮಹಿಳಾ ವಿಭಾಗದ ಅಧ್ಯಕ್ಷೆ ಡಿ.ಜಿ.ಮಠದ್ ಇತರರಿದ್ದರು. 
ಕೊಪ್ಪಳ

ವ್ಯಕ್ತಿತ್ವ ವಿಕಸನಕ್ಕೆ ವಚನ ಸಾಹಿತ್ಯ ಪೂರಕ

ಗಂಗಾವತಿ: ವಚನ ಸಾಹಿತ್ಯ ನೆಮ್ಮದಿ ಬದುಕಿಗೆ ಆಧಾರವಾಗಿದ್ದು, ಸಮಾನತೆ ತತ್ವಗಳನ್ನು 12ನೇ ಶತಮಾನದಲ್ಲಿಯೇ ನೀಡಿದೆ ಎಂದು ಹಾಸನ ಜಿಲ್ಲೆ ಮಲ್ಲೇದೇವರಪುರದ ಮುಕುಂದೂರು ವಿರಕ್ತಮಠದ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ ಹೇಳಿದರು.
ಬಸವ ಜಯಂತಿ ನಿಮಿತ್ತ ನಗರದ ಶ್ರೀ ಕೊಟ್ಟೂರು ಬಸವೇಶ್ವರ ದೇವಾಲಯ ವೇದಿಕೆಯಲ್ಲಿ ಬಸವ ಜಯಂತಿ ಆಚರಣೆ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ಶರಣರ ಜೀವನ ದರ್ಶನ ಪ್ರವಚನದ ಸಮಾರೋಪದಲ್ಲಿ ಮಾತನಾಡಿದರು.
800 ವರ್ಷಗಳ ಹಿಂದೆ ಸಮಾನತೆಯ ತತ್ವಗಳನ್ನು ನೀಡಿದ ಬಸವಣ್ಣ, ಎಲ್ಲರನ್ನೂ ಒಪ್ಪಿಕೊಂಡ ಶ್ರೇಷ್ಠ ದಾರ್ಶನಿಕರು. ವಚನ ಸಾಹಿತ್ಯ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದ್ದು, ಇಂತಹ ಕಾರ್ಯಕ್ರಮಗಳು ನಿರಂತರವಾಗಬೇಕಿದೆ. ಬಸವ ತತ್ವಗಳನ್ನು ಮನೆಮನಗಳಿಗೆ ತಲುಪಿಸುವ ಕರ್ತವ್ಯ ಪ್ರತಿಯೊಬ್ಬರ ಮೇಲಿದೆ ಎಂದರು.
ಏ.10ರಿಂದ 21ರವರೆಗೆ ಹಮ್ಮಿಕೊಂಡಿದ್ದ ಪ್ರವಚನ ಕುರಿತು ಸಮಿತಿ ಸದಸ್ಯ ಎ.ಕೆ.ಮಹೇಶಕುಮಾರ ಮಾಹಿತಿ ನೀಡಿದರು. ಪ್ರಭಾರ ತಹಸೀಲ್ದಾರ್ ವಿಶ್ವನಾಥ ಮುರಡಿ, ಬಸವ ಜಯಂತಿ ಆಚರಣೆ ಸಮಿತಿ ಗೌರವಾಧ್ಯಕ್ಷ ಎ್.ಷಣ್ಮುಖಪ್ಪ, ಕಾರ್ಯಾಧ್ಯಕ್ಷ ಅರಳಿ ಶೇಖರಪ್ಪ, ಮಹಿಳಾ ವಿಭಾಗದ ಅಧ್ಯಕ್ಷೆ ಡಿ.ಜಿ.ಮಠದ್, ಸಂಚಾಲಕ ಕೆ.ಬಸವರಾಜ್, ಸದಸ್ಯರಾದ ದಿಲೀಪ್ ವಂದಾಲ್, ಸಿ.ಮಹಾಲಕ್ಷ್ಮೀ, ಚನ್ನಬಸಮ್ಮ, ವೀರೇಶ ರೆಡ್ಡಿ, ಡಾ.ಶಿವಕುಮಾರ ಮಾ.ಪಾಟೀಲ್, ಶ್ರೀಶೈಲ ಪಟ್ಟಣಶೆಟ್ಟಿ, ದೇವಾಲಯ ಸಮಿತಿ ಹೊಸಳ್ಳಿ ಶಂಕರಗೌಡ ಇತರರಿದ್ದರು.