ವಿ.ಎಸ್.ಉಗ್ರಪ್ಪ 
ಕೊಪ್ಪಳ

ಕೈ ನಾಯಕರಿಗೆ ಅನಗತ್ಯ ತೊಂದರೆ

ಶಾಮಸುಂದರ್ ಕೊಪ್ಪಳಕರ್
ಕೊಪ್ಪಳ : ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹೆಸರಿನಲ್ಲಿ ಇಷ್ಟು ವರ್ಷ ಪ್ರಕರಣ ದಾಖಲಿಸದೇ ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಕಿರುಕುಳ ನೀಡಲಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎ್ಐಆರ್ ಮಾಡಿಲ್ಲ. ಕಾನೂನು ಪಾಲಿಸಿಲ್ಲ. ರಾಜಕೀಯ ಕಾರಣಕ್ಕೆ ಜಾರಿ ನಿರ್ದೇಶನದ ಮೇಲೆ ಒತ್ತಡ ಹೇರಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಕಿರುಕುಳ ನೀಡಿದ್ದಾರೆ.
ಬಿಜೆಪಿಗರಿಗೆ ಹತಾಶೆ ಕಾಡುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ವಾಡಿದ ಗಾಂಧೀಜಿ, ಜವಾಹರಲಾಲ್ ನೆಹರು 5 ಸಾವಿರ ಹೋರಾಟಗಾರರು ಸೇರಿ ಪ್ರಾರಂಭಿಸಿದ ಪತ್ರಿಕೆ ವಿರುದ್ಧ ದಾಳಿ ಮಾಡುತ್ತಿದ್ದಾರೆ. ಇಡಿ ನಡೆಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ತಕ್ಷಣ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಮನರೇಗಾ ಹೆಸರು ಬದಲಾಯಿಸಿದ್ದಾರೆ. ಕಾಯ್ದೆ ಬಲಪಡಿಸುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಅನುದಾನ ಕಡಿತಗೊಳಿಸಿ ಶೇ.60 ರಾಜ್ಯ ಸರ್ಕಾರವೇ ಭರಿಸಬೇಕೆಂದು ಹೇಳುತ್ತಿದ್ದಾರೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯಗಳಿಗೆ ಇದು ಹೊರೆ ಆಗಲಿದೆ. ಗಾಂಧೀಜಿಗೆ ಅಪಚಾರ ಮಾಡಲು ಯತ್ನಿಸಿದ್ದಕ್ಕೆ ಕೇಂದ್ರ ಸರ್ಕಾರ ದೇಶದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ರಾಮ ಉತ್ತಮ ರಾಜನೀತಿಗೆ ಆದರ್ಶವಾಗಿದ್ದಾನೆ. ಆತನ ಆಶಯದಂತೆ ಬಿಜೆಪಿ ನಡೆದುಕೊಳ್ಳುತ್ತಿಲ್ಲ. ತಮ್ಮ ಪತ್ನಿಯನ್ನೇ ರಕ್ಷಣೆ ವಾಡದ ಪ್ರಧಾನಿ ಮೋದಿಗೆ ರಾಮನ ಹೆಸರೇಳಲು ಅರ್ಹತೆ ಇದೆಯಾ? ರಾಮನು ಜಾತಿರಹಿತ, ವರ್ಗರಹಿತ, ಸಮಪಾಲು, ಸಮ ಬಾಳು, ಸವಾನ ಅವಕಾಶದ ಸವಾಜ ಕಟ್ಟಿದ್ದರು. ರಾಮನ ಆಶಯಕ್ಕೆ ಬದ್ಧವಾಗಿರುವ ಪಕ್ಷ ಕಾಂಗ್ರೆಸ್. ಬಿಜೆಪಿಯು ಓಟಿಗಾಗಿ ರಾಮನ ಹೆಸರು ಹೇಳುತ್ತದೆ. ರಾಮನ ಹೆಸರಲ್ಲಿ ಹೊಸ ಕಾರ್ಯಕ್ರಮ ರೂಪಿಸಬಹುದಿತ್ತು. ಗಾಂಧೀಜಿ ಹೆಸರನ್ನು ಬದಲಿಸಲು ವಿಕಸಿತ ಭಾರತ ವಿ ರಾಮ್ ಜಿ ಬಿಲ್ ತಂದಿದ್ದಾರೆಂದು ಕಿಡಿಕಾರಿದರು.
ಕಾಂಗ್ರೆಸ್ ಪದಾಧಿಕಾರಿಗಳಾದ ಕೃಷ್ಣ ಇಟ್ಟಂಗಿ, ಅಕ್ಬರ್ ಪಾಷಾ ಪಲ್ಟನ್, ಜ್ಯೋತಿ ಗೊಂಡಬಾಳ, ಶೈಲಜಾ ಹಿರೇಮಠ, ಮಂಜುನಾಥ ಗೊಂಡಬಾಳ, ಪ್ರಸನ್ನ ಗಡಾದ ಇತರರಿದ್ದರು.