ಕೊಪ್ಪಳ ಜಿಲ್ಲಾ ಆಸ್ಪತ್ರೆ ಮುಂಭಾಗದ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಕಸದ ರಾಶಿ, ಪ್ಲಾಸ್ಟಿಕ್ ಸುಟ್ಟಿರುವುದು.
ಕೊಪ್ಪಳ: ಜಿಲ್ಲಾ ಆಸ್ಪತ್ರೆ ಮುಂಭಾಗ ಹಾಗೂ ಸುತ್ತಲಿನ ಪ್ರದೇಶ ಅಸ್ವಚ್ಛತೆಯಿಂದ ಕೂಡಿದ್ದು, ರೋಗಿಗಳು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಆಸ್ಪತ್ರೆ ಮುಂಭಾಗ, ವಾಹನ ನಿಲುಗಡೆ ಪ್ರದೇಶ, 100 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆಗೆ ತೆರಳುವ ವಾರ್ಗ ಹಾಗೂ ಆಸ್ಪತ್ರೆಯ ಹಿಂಭಾಗ ಸೇರಿದಂತೆ ಬಹುತೇಕ ಗಿಡಗಂಟಿಗಳು ಬೆಳೆದಿದ್ದು, ಕಸಕಡ್ಡಿಗಳ ರಾಶಿ ಬಿದ್ದಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಹುಳ ಉಪ್ಪಡಿಗಳು, ಹಾವು ಸೇರಿದಂತೆ ವಿಷಕಾರಿ ಜೀವಿಗಳು ಆಶ್ರಯ ಪಡೆಯುವ ಸಾಧ್ಯತೆ ಇದೆ.
ನೀರು ನಿಲ್ಲುವ ಪರಿಸ್ಥಿತಿ ಉಂಟಾದರೆ ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಿ ಡೆಂೆ, ಮಲೇರಿಯಾ ಸೇರಿ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯ ಇದೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ಹಿಂಭಾಗದಲ್ಲಿ ಕಸಕಡ್ಡಿಗಳನ್ನು ತೆರವುಗೊಳಿಸದೇ ಬಿಟ್ಟಿರುವುದರಿಂದ ದುರ್ವಾಸನೆ ಹರಡುತ್ತಿದ್ದು, ಪರಿಸರದ ಸ್ವಚ್ಛತೆಗೂ ಧಕ್ಕೆ ಉಂಟಾಗಿದೆ. ಆಸ್ಪತ್ರೆ ಆವರಣದಲ್ಲಿನ ಗಿಡಗಂಟಿಗಳನ್ನು ಕೂಡಲೇ ತೆರವುಗೊಳಿಸಿ, ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಮಳೆಗಾಲದಲ್ಲಿ ರೋಗ ಹರಡುವುದನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಆರೋಗ್ಯ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
"
ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆ ಆವರಣ ಸ್ವಚ್ಛತೆ ವಾಡಲು ಆಗುತ್ತಿಲ್ಲ. ಇರುವ 50ಜನ ಸಿಬ್ಬಂದಿಯಲ್ಲಿ ಮೂವರು ಆಸ್ಪತ್ರೆ ನೋಡಿಕೊಳ್ಳುತ್ತಿದ್ದಾರೆ. ಲೋಕಾಯುಕ್ತರ ಜಿಲ್ಲೆ ಪ್ರವಾಸ ಸಮಯದಲ್ಲಿ ಸ್ವಚ್ಛತೆ ವಾಡಿಸಲಾಗಿತ್ತು. ಮತ್ತೆ ಅದೇರಿತಿ ಆಗಿದೆ. ಈ ಕುರಿತು ಕಿಮ್ಸ್ ಡೈರೆಕ್ಟರ್‌ಗೆ ಈಗಾಗಲೇ ಪತ್ರ ಬರೆಯಲಾಗಿದೆ.
— ಮಂಜುನಾಥ ಪಿ. ಸಾಲಮನಿ ವೈದ್ಯಕೀಯ ಅಧೀಕ್ಷಕ ಜಿಲ್ಲಾ ಆಸ್ಪತ್ರೆ ಕೊಪ್ಪಳ.
"
ಆರೋಗ್ಯ ಕಾಪಾಡಬೇಕಾದ ಜಿಲ್ಲಾ ಆಸ್ಪತ್ರೆ ಆವರಣ ಅಸ್ವಚ್ಛತೆಯಿಂದ ಕೂಡಿರುವುದು ವಿಷಾದನೀಯ. ಆಸ್ಪತ್ರೆಗೆ ಬರುವ ರೋಗಿಗಳು, ಗರ್ಭಿಣಿಯರು, ಮಕ್ಕಳು ಹಾಗೂ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಈ ನಿರ್ಲಕ್ಷ್ಯ ಸಹಿಸಲಾಗದು. ಸಮಸ್ಯೆ ಬಗೆಹರಿಯದಿದ್ದರೆ ಎಬಿವಿಪಿಯಿಂದ ಪ್ರತಿಭಟನೆ ನಡೆಸಲಾಗುವುದು.
— ಶರಣು ಗೋಗಗೇರಿ ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೊಪ್ಪಳ.