ಕೊಪ್ಪಳ ತಾಲೂಕಿನ ಹಾಲವರ್ತಿಯ ಪಿಬಿಎಸ್ ಪೆ.ಲಿ.ಕಾರ್ಖಾನೆಯನ್ನು ಗುರುವಾರ ಅಧಿಕಾರಿಗಳು ಸೀಜ್ ಮಾಡಿದರು. ಸಹಾಯ ಆಯುಕ್ತ ಮಹೇಶ ಮಾಲಗಿತ್ತಿ ನೇತೃತ್ವದಲ್ಲಿ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಸಹಾಯಕ ಪರಿಸರ ಅಧಿಕಾರಿ ಅಮರ್, ಪಿಎಸ್ಐ ವಿರೇಶ ಇದ್ದರು.
- ಇನ್ನು ಮೂರು ಕಂಪನಿ ಬಾಕಿ
- ಮೊದಲು ವರದಿ ಬಿತ್ತರಿಸಿದ್ದ ವಿಜಯವಾಣಿ
ಕೊಪ್ಪಳ : ಪರಿಸರ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದ ಎರಡು ಕಾರ್ಖಾನೆಗಳಿಗೆ ಗುರುವಾರ ಜಿಲ್ಲಾಡಳಿತ ಬೀಗ ಹಾಕಿದೆ.
ಕೊಪ್ಪಳ ತಾಲೂಕಿನ ಅಲ್ಲಾನಗರ ಗ್ರಾಮದ ಹೊಸಪೇಟೆ ಇಸ್ಪಾತ್ ಪೆ.ಲಿ. ಹಾಗೂ ಪಿಬಿಎಸ್ (ಪಿ.ಬಾಲಸುಬ್ಬಶೆಟ್ಟಿ) ಪವರ್ ಆ್ಯಂಡ್ ಸ್ಟೀಲ್ ಪೆ.ಲಿ. ್ಯಾಕ್ಟರಿಗಳಿಗೆ ಬೀಗ್ ಹಾಕಿ ಸೀಜ್ ಮಾಡಲಾಯಿತು. ಸಹಾಯ ಆಯುಕ್ತ ಮಹೇಶ ಮಾಲಗಿತ್ತಿ ನೇತೃತ್ವದಲ್ಲಿ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಸಹಾಯಕ ಪರಿಸರ ಅಧಿಕಾರಿ ಅಮರ್ ಹಾಗೂ ಜೆಸ್ಕಾಂ ಸಿಬ್ಬಂದಿ ತೆರಳಿ ಕಾರ್ಖಾನೆಯಲ್ಲಿದ್ದವರನ್ನು ಹೊರ ಕಳಿಸಿದರು. ಬಳಿಕ ಬಾಗಿಲು ಹಾಕಿ ಸೀಜ್ ಮಾಡಲಾಯಿತು. ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.
ಪರಿಸರ ನಿಯಮ ಉಲ್ಲಂನೆ ಹಾಗೂ ಕಪು$್ಪ ಧೂಳು ಹೊರ ಸೂಸುವ ಮೂಲಕ ಜನ ಜೀವನಕ್ಕೆ ಕೊಪ್ಪಳ ಪರಿಸದರ ಕಾರ್ಖಾನೆಗಳು ಮಾರಕವಾಗಿವೆ. ಈ ಬಗ್ಗೆ ಜನರು ನಿತಂತರ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಪರಿಸರ ಮಾಲಿನ್ಯ ಕಂಡು ಕೆಂಡವಾಗಿದ್ದರು. ಮಂಡಳಿ ಜಾರಿ ನಿರ್ದೇಶನ ವಿಭಾಗ ಐದು ಕಾರ್ಖಾನೆ ಬಂದ್ ಮಾಡಬೇಕೆಂದು ವರದಿ ಶಿಾರಸ್ಸು ಮಾಡಿದೆ.
ಅಲ್ಲಾನಗರದ ಹೊಸಪೇಟೆ ಇಸ್ಪಾತ್ ಪೆ.ಲಿ., ಕಾಸನಕಂಡಿ ಎಚ್ಆರ್ಜಿ ಅಲಾಯನ್ಸ್ ಆಂಡ್ ಸ್ಟೀಲ್ಟ್ ಪೆ.ಲಿ., ಹಿರೇ ಬಗನಾಳದ ವನ್ಯ ಸ್ಟೀಲ್ಸ್ ಮತ್ತು ಹಾಲವರ್ತಿಯ ಪಿಬಿಎಸ್ ಪವರ್ ಆ್ಯಂಡ್ ಸ್ಟೀಲ್ಸ್ಗೆ ಏಪ್ರೀಲ್ 9ರಂದು ಕ್ಲೋಸರ್ ನೋಟಿಸ್ ನೀಡುವಂತೆ ಮಂಡಳಿ ಸಭೆಯಲ್ಲಿ ಠರಾವು ಅನುಮೋದಿಸಲಾಗಿದೆ. ಅದರಂತೆ ಗುರುವಾರ ಎರಡು ಕಂಪನಿಗಳಿಗೆ ಬೀಗ ಹಾಕಿ ಬಂದ್ ಮಾಡಿಸಲಾಗಿದೆ. ಬಾಕಿ ಮೂರು ಕೈಗಾರಿಕಗಳ ಕ್ಲೋಸರ್ ಆರ್ಡರ್ ಬಂದ ನಂತರ ಬಂದ್ ಮಾಡುವುದಾಗಿ ಅಧಿಕಾರಿಗಳು ವಿಜಯವಾಣಿಗೆ ಮಾಹಿತಿ ನೀಡಿದರು.
ವಿಜಯವಾಣಿ ಪ್ರಕಟಿಸಿದ್ದ ವಿಶೇಷ ವರದಿ ಕೈಗಾರಿಕೆಗಳ ಮಾಲಿನ್ಯ ಹಾಗೂ ದುಷ್ಪರಿಣಾಮಗಳ ಬಗ್ಗೆ ವಿಜಯವಾಣಿ ನಿರಂತರ ವರದಿ ಪ್ರಕಟಿಸುತ್ತಿದೆ. ಐದು ಕೈಗಾರಿಕೆಗಳಿಗೆ ಕ್ಲೋಸರ್ ನೋಟಿಸ್ ನೀಡಿದ ಬಗ್ಗೆ ವಿಜಯವಾಣಿಯಲ್ಲಿ ಏ.25ರಂದು "ಕಾರ್ಖಾನೆಗಳಿಗೆ ಬೀಳುತ್ತಾ ಬೀಗ ?" ಶೀರ್ಷಿಕೆಯಡಿ ಮೊದಲು ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.