ಹನುಮಸಾಗರ ಶ್ರೀ ಬೀರಲಿಂಗೇಶ್ವರ ಜಾತ್ರೆಯಲ್ಲಿ 6 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. 
ಕೊಪ್ಪಳ

ಗುರು ಹಿರಿಯರನ್ನು ಗೌರವದಿಂದ ಕಾಣಿ

ಪ್ರಮುಖ ಮುಖ್ಯಾಂಶಗಳು

  • ಗುರು
  • ಹಿರಿಯರನ್ನು
  • ಗೌರವ
ಹನುಮಸಾಗರ: ಸತಿ-ಪತಿಗಳು ಅರಿತುಕೊಂಡು ಸುಖವಾಗಿ ಸಂಸಾರ ನಡೆಸಬೇಕು ಎಂದು ಬಾದಿಮನಾಳ ಕನಕ ಗುರುಪೀಠದ ಪೀಠಾಧಿಪತಿ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪಟ್ಣದ ಶ್ರೀ ಬೀರಲಿಂಗೇಶ್ವರ ಜಾತ್ರೆ ನಿಮಿತ್ತ ಭಾನುವಾರ ಹಮ್ಮಿಕೊಂಡ ಪುರಾಣ ಮಂಗಳೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ನಾವು ಹುಟ್ಟುವಾಗ ಏನು ತರುವುದಿಲ್ಲ. ಮರಣ ಹೊಂದುವಾಗ ಏನು ತೆಗೆದುಕೊಂಡು ಹೋಗುವುದಿಲ್ಲ. ಆದರೆ ಜೀವತಾವಧಿಯಲ್ಲಿ ಮಾಡಿದ ಸಾಮಾಜಿಕ ಕಾರ್ಯಗಳು ಸದಾ ನಮ್ಮನ್ನು ಜೀವಂತವಾಗಿರುಸುತ್ತವೆ. ಅತ್ತೆ ಸೊಸೆಯನ್ನು ಮಗಳಂತೆ, ಸೊಸೆ ಅತ್ತೆಯನ್ನು ತಾಯಿಯಂತೆ ಕಾಣಬೇಕು. ಗುರು ಹಿರಿಯರನ್ನು ಗೌರವದಿಂದ ಕಾಣಬೇಕು. ಅವರ ಮಾರ್ಗದರ್ಶನದಲ್ಲಿ ಸಂಸಾರ ನಡೆಸಬೇಕು. ಪ್ರತಿ ವರ್ಷ ಶಿವರಾತ್ರಿ ಯಂದು ಸಾಮೂಹಿಕ ವಿವಾಹ ಹಮ್ಮಿಕೊಳ್ಳುತ್ತಿರುವ ಹಾಲುಮತ ಸಮುದಾಯದ ಕಾರ್ಯ ಶ್ಲಾಘನೀಯ ಎಂದರು.
ಜಿಪಂ ಮಾಜಿ ಸದಸ್ಯ ಫಕೀರಪ್ಪ ಚಳಗೇರಿ ಮಾತನಾಡಿ, ಶಿವ ಶರಣರ ಸಿದ್ಧಾಂತಗಳನ್ನು ಪಾಲಿಸಬೇಕು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು. ನಾವು ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು ಎಂದರು.
ಪಿಎಸ್‌ಐ ಪರಶುರಾಮ ವಣಗೇರಿ, ಜಿಪಂ ಮಾಜಿ ಸದಸ್ಯ ಭೀಮಣ್ಣ ಅಗಸಿಮುಂದಿನ, ಪ್ರಮುಖರಾದ ಸಿದ್ದಯ್ಯ ಗುರುವಿನ, ಹಾಲುಮತ ಸಮುದಾಯದ ಸ್ಥಳೀಯ ಅಧ್ಯಕ್ಷ ಭರಮಪ್ಪ ಬಿಂಗಿ, ವಿಶ್ವನಾಥ ಕನ್ನೂರ, ಸೂಚಪ್ಪ ದೇವರಮನಿ, ಬಸವರಾಜ ಬಾಚಲಾಪುರ, ಶ್ರೀಶೈಲ ಮೋಟಗಿ, ಶಿವಪ್ಪ ಕಂಪ್ಲಿ, ಚಂದಪ್ಪ ಹಕ್ಕಿ, ಭವಾನಿಸಾ ಪಾಟೀಲ್, ತಿಮ್ಮನಗೌಡ ಪೊಲೀಸ್ ಪಾಟೀಲ್ ಇತರರಿದ್ದರು.