ಡಾ.ಚನ್ನಮಲ್ಲಸ್ವಾಮೀಜಿ 
ಕೊಪ್ಪಳ

ಗುರು-ಹಿರಿಯರನ್ನು ಗೌರವದಿಂದ ಕಾಣಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಸಾಮೂಹಿಕ
  • ವಿವಾಹ
  • ಕಾರ್ಯಕ್ರಮ
ಕನಕಗಿರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಸಂಸಾರದಲ್ಲಿ ಬರುವ ಕಷ್ಟ -ಸುಖ, ನೋವು- ನಲಿವುಗಳನ್ನು ಸಮನಾಗಿ ಸ್ವೀಕರಿಸಿ ಮಾದರಿ ಜೀವನ ಸಾಗಿಸಬೇಕು ಎಂದು ಕನಕಗಿರಿಯ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ.ಚನ್ನಮಲ್ಲಸ್ವಾಮೀಜಿ ಹೇಳಿದರು.
ತಾಲೂಕಿನ ಚಿಕ್ಕ ಮಾದಿನಾಳ ಗ್ರಾಮದ ಈಶ್ವರ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 38ನೇ ವರ್ಷದ ರುದ್ರಾಭಿಷೇಕ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಗಂಡ-ಹೆಂಡತಿಯಾದವರು ನೊಗಕ್ಕೆ ಕಟ್ಟಿದ ಎತ್ತುಗಳು ಬಂಡಿಯನ್ನು ಎಳೆದೋಯ್ಯುವಂತೆ ಸಂಸಾರ ತೂಗಿಸಬೇಕು. ಆಗ ಮಾತ್ರ ಜೀವನ ಸಾರ್ಥಕ ಹೊಂದುತ್ತದೆ. ಸೊಸೆಯಾದವಳು ಅತ್ತೆ-ಮಾವಂದಿರನ್ನು ತಂದೆ ತಾಯಿಯಂತೆ ಸಲುಹಬೇಕು. ಗುರು-ಹಿರಿಯರಿಗೆ ಗೌರವಿಸುವ ಕೆಲಸ ದಂಪತಿಗಳು ಮಾಡಬೇಕು. ಮಕ್ಕಳಿಗೆ ಸಂಸ್ಕಾರದ ಜತೆಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ತಿಳಿಸಿದರು.
13 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಜಿಪಂ ಮಾಜಿ ಸದಸ್ಯರಾದ ವೀರೇಶ ಸಮಗಂಡಿ, ವೀರೇಶ ಸಾಲೋಣಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದಪ್ಪ ನೀರಲೂಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ಸ್ವಾಮಿ ಕಲುಬಾಗಿಲಮಠ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ ದಡೆಸೂಗೂರು, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ನಿಕಟ ಪೂರ್ವ ಅಧ್ಯಕ್ಷ ಮಹಾಂತೇಶ ಸಜ್ಜನ್, ಪ್ರಮುಖರಾದ ಶಶಿ ತಂಗಡಗಿ, ರಂಗಪ್ಪ ಕೊರಗಟಗಿ, ವೆಂಕಟೇಶ ತೀರ್ಥಭಾವಿ, ಕುಮಾರೆಪ್ಪ ಇತರರಿದ್ದರು.