ಪ್ರಯಾಣಿಕ ಮೊಬೈಲ್ ಟಾರ್ಚ್‌ ಬೆಳಕಲ್ಲಿ ಸಾಗಿದ ಸಾರಿಗೆ ಬಸ್. K SHREEKANTHA
ಕೊಪ್ಪಳ

ಮೊಬೈಲ್ ಟಾರ್ಚ್‌ನಲ್ಲಿ ಓಡಿದ ಸಾರಿಗೆ ಬಸ್

ಬಸ್‌ನ ಲೈಟ್ ವಯರ್ ಕೈ ಕೊಟ್ಟಿದ್ದರಿಂದ ಹೆಡ್‌ಲೈಟ್ ಆಫ್ ಆಗಿವೆ. ದಾರಿ ಕಿರಿದಾಗಿದ್ದು ಹಿಂದೆ ವಾಹನಗಳಿದ್ದ ಕಾರಣ ಕೆಲ ದೂರದವರೆಗೆ ಮೊಬೈಲ್ ಟಾರ್ಚ್‌ನಲ್ಲೇ ಬಸ್ ಓಡಿಸಲಾಗಿದೆ. ಪ್ರಯಾಣಿಕರು ಮೊಬೈಲ್ ಟಾರ್ಚ್ ಆನ್ ಮಾಡಿ ಸಹಾಯ ಮಾಡಿದ್ದಾರೆ.

ಕೊಪ್ಪಳ: ಸಾರಿಗೆ ಬಸ್ ಹೆಡ್ ಲೈಟ್ ಕೆಟ್ಟಿದ್ದರಿಂದ ಪ್ರಯಾಣಿಕರ ಮೊಬೈಲ್ ಟಾರ್ಚ್‌ನಲ್ಲೇ ಕೆಲ ದೂರ ಸಾಗಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ತಾಲೂಕಿನ ಶಹಾಪುರಕ್ಕೆ ತೆರಳುತ್ತಿದ್ದ ಬಸ್‌ನ ಲೈಟ್ ವಯರ್ ಕೈ ಕೊಟ್ಟಿದ್ದರಿಂದ ಹೆಡ್‌ಲೈಟ್ ಆಫ್ ಆಗಿವೆ. ದಾರಿ ಕಿರಿದಾಗಿದ್ದು ಹಿಂದೆ ವಾಹನಗಳಿದ್ದ ಕಾರಣ ಕೆಲ ದೂರದವರೆಗೆ ಮೊಬೈಲ್ ಟಾರ್ಚ್‌ನಲ್ಲೇ ಬಸ್ ಓಡಿಸಲಾಗಿದೆ. ಪ್ರಯಾಣಿಕರು ಮೊಬೈಲ್ ಟಾರ್ಚ್ ಆನ್ ಮಾಡಿ ಸಹಾಯ ಮಾಡಿದ್ದಾರೆ.

ಬಳಿಕ ರಸ್ತೆ ಬದಲಿ ನಿಲ್ಲಿಸಿ ವೈಯರಿಂಗ್ ಸರಿಪಡಿಸಲಾಗಿದೆ. ನಂತರ ಹೆಡ್‌ಲೈಟ್ ಆನ್ ಆಗಿದ್ದು ವಾಹನ ಡಿಪೋಗೆ ತರಲಾಗಿದೆ. ಏಕಾಏಕಿ ಹೆಡ್‌ಲೈಟ್ ಕೈಕೊಟ್ಟಿದ್ದರಿಂದ ಪ್ರಯಾಣಿಕರು ಭೀತಿಗೊಂಡರು.