ಕನಕಗಿರಿ ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕರ ಕಚೇರಿಗೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕನಕಗಿರಿ: ಶಾಲಾ ಸಮಯಕ್ಕೆ ಬಸ್‌ಸಂಚಾರ ಆರಂಭಿಸಲು ಆಗ್ರಹಿಸಿ ತಾಲೂಕಿನ ಬಸರಿಹಾಳ, ಗೌರಿಪುರ, ದೇವಲಾಪುರ, ಬೈಲಕ್ಕಂಪುರ ಗ್ರಾಮದ ವಿದ್ಯಾರ್ಥಿಗಳು ಬುಧವಾರ ಪಟ್ಟಣದ ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗಂಗಾವತಿ, ಯಲಬುರ್ಗಾ ಹಾಗೂ ಕುಷ್ಟಗಿ ಘಟಕಗಳ ಬಸ್‌ಗಳು ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಈ ಬಗ್ಗೆ ಕುಷ್ಟಗಿ ಹಾಗೂ ಯಲಬುರ್ಗಾ ಘಟಕ ಬಸ್‌ಗಳ ಚಾಲಕ, ನಿರ್ವಾಹಕರಿಗೆ ಬಸ್ ಓಡಿಸುವಂತೆ ಮನವಿ ಮಾಡಿದರೂ ಬೇಜವಾಬ್ದಾರಿತನದ ಉತ್ತರ ನೀಡುತ್ತಿದ್ದಾರೆ. ಸ್ಥಳೀಯ ಸಂಚಾರಿ ನಿಯಂತ್ರಕರು ಸಹ ನಮಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ವೆಂಕಟೇಶ ಕನಕಗಿರಿಗೆ ಮನವಿ ಸಲ್ಲಿಸಲಾಯಿತು.
ವಿದ್ಯಾರ್ಥಿಗಳಾದ ಅಶ್ವಿನಿ, ರವಿಕುಮಾರ, ನಿರುಪಾದಿ, ಯಮನೂರ, ಪ್ರಜ್ವಲ್, ನಾಗರಾಜ, ಮಾರುತಿ, ನಾಗಾರ್ಜುನ, ಷಣ್ಮುಖ, ಮಹಾಂತೇಶ, ಬಸವರಾಜ, ಶರಣಬಸವ, ನಂದಿನಿ, ಅಶ್ವಿನಿ, ಪಲ್ಲವಿ, ಶ್ರೀದೇವಿ ಗೌರಿಪುರ, ದ್ಯಾಮಮ್ಮ ಇತರರಿದ್ದರು.