ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದ ಗೋಪುರ ಕಟ್ಟಡದ ಕಾಮಗಾರಿಯನ್ನು ಡಾ.ಮಹಾದೇವ ಸ್ವಾಮೀಜಿ ಪರಿಶೀಲಿಸಿದರು. ಮಠದ ಆಡಳಿತಾಧಿಕಾರಿ ಸಂಗಮೇಶ ಕಲ್ಮಠ, ಗ್ರಾಪಂ ಮಾಜಿ ಸದಸ್ಯರಾದ ವೀರೇಶ ಬಿಸನಳ್ಳಿ, ನೀಲನಗೌಡ ಮಾಲೀಪಾಟೀಲ ಇದ್ದರು.
ಕುಕನೂರು: ತಳಕಲ್ ಗ್ರಾಮಕ್ಕೆ ಅನ್ನದಾನೀಶ್ವರ ಶಾಖಾಮಠ ಶಕ್ತಿ ಕೇಂದ್ರವಾಗಿದ್ದು, ಗೋಪುರ ನಿರ್ಮಾಣದಿಂದ ಮಠಕ್ಕೆ ಮತ್ತಷ್ಟು ಶೋಭೆ ಬರಲಿದೆ. ಈ ಪುಣ್ಯ ಕಾರ್ಯಕ್ಕೆ ಗ್ರಾಮಸ್ಥರು ತನು ಮನ ಧನದಿಂದ ಸಹಕರಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ವೀರೇಶ ಬಿಸನಳ್ಳಿ ಹೇಳಿದರು.
ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದ ಗೋಪುರ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಿ ಇತ್ತೀಚೆಗೆ ಮಾತನಾಡಿದರು.
ಮಠ ಮಾನ್ಯಗಳಿಂದಲೇ ನಮ್ಮ ಸಂಸ್ಕೃತಿ ಉಳಿದಿದೆ. ಅನ್ನದಾನೀಶ್ವರರ ಕೃಪೆಯಿಂದ ಈ ಗೋಪುರ ಕಾರ್ಯ ಯಶಸ್ವಿಯಾಗಿ ನೆರವೇರಲಿ ಇದಕ್ಕಾಗಿ ಯುವಕರ ಜತೆಗೆ ದಾನಿಗಳು ಹೆಚ್ಚಿನ ಸೇವೆ ಸಲ್ಲಿಸಬೇಕು ಎಂದರು.
ಗ್ರಾಪಂ ಮಾಜಿ ಸದಸ್ಯ ನೀಲನಗೌಡ ಮಾಲೀಪಾಟೀಲ ಮಾತನಾಡಿ, ಅನ್ನದಾನೀಶ್ವರರು ಅನ್ನದ ಜತೆಗೆ ಜ್ಞಾನವನ್ನೂ ನೀಡಿದ ಸಂತರು. ಅವರ ಶಾಖಾಮಠದ ಗೋಪುರ ನಿರ್ಮಾಣ ಇಡೀ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಎಲ್ಲ ಸಮುದಾಯದವರು ಒಗ್ಗಟ್ಟಾಗಿ ಈ ಕೆಲಸ ಪೂರ್ಣಗೊಳಿಸೋಣ, ಶ್ರೀಮಹಾದೇವ ಸ್ವಾಮೀಜಿಯವರ ಕ್ರಿಯಾಶೀಲತೆ ನಮಗೆ ಪ್ರೇರಣೆಯಾಗಿದೆ ಎಂದರು.
ಡಾ.ಮಹಾದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುಕನೂರು ಮಠದ ಆಡಳಿತಾಧಿಕಾರಿ ಸಂಗಮೇಶ ಕಲ್ಮಠ, ಪ್ರಮುಖರಾದ ಪಕ್ಕಪ್ಪ ಮುರಿಗಿ, ನಿಂಗಪ್ಪ ನಿಟ್ಟಾಲಿ, ಮಲ್ಲಯ್ಯ ಕಣವಿ, ಆನಂದ ಚಿಲವಾಡಿಗಿ, ಅಬ್ಬಸಾಲಿ ಮುಂಡರಗಿ, ಪಕ್ಕಪ್ಪ ಅಳವಂಡಿ, ರಾಮಣ್ಣ, ಬಸವರಾಜ ಬ್ಯಾಳಿ, ಸೋಮಪ್ಪ ಕರ್ಜಗಿ, ಮುದಿಯಪ್ಪ ಯೋಗೆಮ್ಮನವರ, ಶೇಖರಗೌಡ ಮಾಲಿಪಾಟೀಲ, ಮಲ್ಲೇಶಪ್ಪ , ಶರಣಪ್ಪ ಬಂಗಾರಿ, ತಿರುಗುಣೇಶ ಇತರರಿದ್ದರು.